ಜನಮನ

ಆಕಾಶದಲ್ಲೊಂದು ಕಾಣಿಸಿಕೊಂಡ ನಿಗೂಢ ಆಕೃತಿ!

Views: 233

ಕನ್ನಡ ಕರಾವಳಿ ಸುದ್ದಿ: ಆಕಾಶದಲ್ಲಿ ಸಾಮಾನ್ಯವಾಗಿ ಕಾಣುವ ಯಾವುದೇ ವಸ್ತು ಬಿಟ್ಟು ಇನ್ನೇನೇ ಕಂಡರೂ ಎಲ್ಲರೂ ಆಶ್ಚರ್ಯ ಪಡೋದು ಖಂಡಿತ. ಕೆಲವರಿಗೆ ಆಶ್ಚರ್ಯ, ಕೆಲವರಿಗೆ ಭಯವೂ ಆಗುವುದುಂಟು. ಇಂಥದ್ದೇ ಒಂದು ಘಟನೆ ಅಥಣಿಯಲ್ಲಿ ನಡೆದಿದೆ.

ಅಥಣಿ ತಾಲೂಕಿನ ತೇಲಸಂಗ ಗ್ರಾಮದಲ್ಲಿ ನಿನ್ನೆ ಸಂಜೆ ಆಕಾಶದಲ್ಲಿ ಗೋಲಾಕಾರದ ನಿಗೂಢ ಆಕೃತಿ ಪತ್ತೆಯಾಗಿದ್ದು, ಜನರಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ನೂರಾರು ಜನರು ರಸ್ತೆಗೆ ಬಂದು ಆಕಾಶ ನೋಡಲು ಪ್ರಾರಂಭಿಸಿದ್ದಾರೆ. ಇದನ್ನು ಕಂಡ ಜನರು ಅಚ್ಚರಿಗೊಂಡಿದ್ದು, ತಮ್ಮ ಗ್ರಾಮಕ್ಕೆ ಏಲಿಯನ್ಸ್ ಬಂದಿರಬಹುದು ಎಂದು ಜನರು ಮಾತನಾಡಿಕೊಳ್ಳಲು ಪ್ರಾಂಭಿಸಿದ್ದರು. ಈ ನಿಗೂಢ ಆಕೃತಿ ಸುಮಾರು ಒಂದು ಗಂಟೆಗಳ ಕಾಲ ಆಕಾಶದಲ್ಲಿ ಕಾಣಿಸಿಕೊಂಡಿದೆ.

ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದಾರೆ. ಇದು ಹವಾಮಾನ ಇಲಾಖೆಯ ಬಲೂನ್ ಆಗಿರಬಹುದೇ? ಡ್ರೋನ್ ಆಗಿರಬಹುದೇ? ಅಥವಾ ಬೇರೇನಾದರೂ ನಿಗೂಢ ವಸ್ತುವೇ ಎಂದು ಗ್ರಾಮಸ್ಥರು ಚರ್ಚಿಸಲಾರಂಭಿಸಿದ್ದರು.

ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರಲ್ಲಿ ತರಹೇವಾರಿ ಪ್ರಶ್ನೆಗಳು ಮೂಡಿವೆ. ಸದ್ಯಕ್ಕೆ ಈ ಆಕೃತಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸ್ಥಳೀಯರು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕಾತುರರಾಗಿದ್ದಾರೆ.

 

Related Articles

Back to top button
error: Content is protected !!