ಇತರೆ

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಯನ ಮೋಹಕವಾಗಿ ನಿರ್ಮಿಸಲ್ಪಟ್ಟ ದಾರು ಶಿಲ್ಪ ಸಮರ್ಪಣೆ 

Views: 589

ಕನ್ನಡ ಕರಾವಳಿ ಸುದ್ದಿ: ಹೊದ್ರಾಳಿ ಸುಬ್ಬಣ್ಣ ನಾಗರಾಜ್ ಹಾಗೂ ಧರ್ಮ ಪತ್ನಿ ಶ್ರೀಮತಿ ಮೀನಾಕ್ಷಿ ನಾಗರಾಜ್ ದಂಪತಿಗಳಿಂದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಒಳಾಂಗಣದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ನೂತನವಾಗಿ ಸಾಗುವಾನಿ ಮರದಿಂದ ಅತ್ಯಂತ ನಯನ ಮೋಹಕವಾಗಿ ನಿರ್ಮಿಸಲ್ಪಟ್ಟ ದಾರು ಶಿಲ್ಪವನ್ನು ಜನವರಿ 2ರಂದು ಶ್ರೀ ದೇವರಿಗೆ ಸಮರ್ಪಣಾ ಕಾರ್ಯಕ್ರಮ ನಡೆಯಿತು.

ದಾನಿಗಳಾದ ಶ್ರೀಯುತ ದಂಪತಿಗಳು ಸ್ಥಳೀಯ ಕೋಟೇಶ್ವರದ ಹೊದ್ರಾಳಿ ನಿವಾಸಿಗಳಾಗಿದ್ದು, ಬೆಂಗಳೂರಿನಲ್ಲಿ ಆನೆಗುಡ್ಡೆ ಶ್ರೀ ವಿನಾಯಕನ ಅನುಗ್ರಹದಿಂದಲೇ ಎವಿಯೇಷನ್ ಟ್ರಾವೆಲ್ಸ್ ಎನ್ನುವ ಉದ್ಯಮವನ್ನು ನಡೆಸುತ್ತಿದ್ದು ಬಂದ ಲಾಭಾಂಶದಲ್ಲಿ ಶ್ರೀ ದೇವರಿಗೆ ಯತಾಶಕ್ತಿ ದೇಣಿಗೆಯನ್ನು ನೀಡುತ್ತಾಬರುತ್ತಿದ್ದರು. ಪ್ರತಿ ವರ್ಷವೂ ಜನವರಿ ಒಂದನೇ ತಾರೀಕಿಗೆ ತಪ್ಪದೇ ಬರುತ್ತಿದ್ದು ಅದರ 50ನೇ ವರ್ಷದ ನೆನಪಿಗಾಗಿ ಒಂದು ಕೋಟಿ ರೂಪಾಯಿ ಮೌಲ್ಯದ ಈ ದಾರು ಶಿಲ್ಪದ ನಿರ್ಮಾಣಕ್ಕೆ ಸಂಪೂರ್ಣ ವೆಚ್ಚವನ್ನು ನೀಡಿದ್ದಾರೆ.

ದೇವಸ್ಥಾನದ ಎದುರು ನಡೆದ ಸರಳ ಸಮಾರಂಭದಲ್ಲಿ ಶ್ರೀಯುತ ದಂಪತಿಗಳನ್ನು ಗೌರವಿಸುತ್ತಾ ಶ್ರೀ ದೇವರ ಅನುಗ್ರಹ ಪ್ರಸಾದ ಹಾಗೂ ವಿಶೇಷ ಸ್ಮರಣಿಕೆ ನೀಡಿ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯರು, ಶ್ರೀಯುತರು ಎರಡು ಹಸ್ತದಿಂದ ದಾನ ಮಾಡುತ್ತಿದ್ದು ಶ್ರೀ ದೇವರು ಅವರಿಗೆ ಅನಂತ ಹಸ್ತದಿಂದ ಅವರ ಇಷ್ಟಾರ್ಥವನ್ನು ಅನುಗ್ರಹಿಸುವಂತಾಗಲಿ ಎಂದು ಪ್ರಾರ್ಥಿಸಿದರು.

ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಅವರ ಕಿರು ಪರಿಚಯವನ್ನು ಮಾಡಿಸುವುದರೊಂದಿಗೆ ಆನೆಗುಡ್ಡೆ ಶ್ರೀ ದೇವಳದೊಂದಿಗೆ ಇರುವ ಅವಿನಾಭಾವ ಸಂಬಂಧವನ್ನು ವಿವರಿಸುತ್ತಾ ಗೌರವ ಪೂರ್ವಕವಾಗಿ ಸ್ವಾಗತಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಕಾಷ್ಟ ಶಿಲ್ಪದ ಕರ್ತೃಗಳಾದ ಸುಕುಮಾರ ಗುಡಿಗಾರ ಹಾಗೂ ಕೃಷ್ಣ ಗುಡಿಗಾರ ಸಹೋದರರು ಹಾಗೂ ದೇವಳದ ಇಂಜಿನಿಯರ್ ಎಚ್.ಶ್ರೀಕಾಂತ ಆಚಾರ್ಯ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೆ.ನಿರಂಜನ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಕೆ ವ್ಯಾಸ ಉಪಾಧ್ಯಾಯ ಸಹೋದರರು, ದೇವಳದ ಮ್ಯಾನೇಜರ್ ನಟೇಶ್ ಕಾರಂತ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಕೆ ರಾಜಾರಾಮ ಉಪಾಧ್ಯಾಯ ಕಾರ್ಯಕ್ರಮವನ್ನು ನಿರ್ವಹಿಸಿದರು.

Related Articles

Back to top button
error: Content is protected !!