ಇತರೆ

ಸಿದ್ದಾಪುರ:ನಿಂತಿದ್ದ ಬೈಕಿಗೆ ಟಿಪ್ಪರ್‌ ಢಿಕ್ಕಿ; ಗಂಭೀರ

Views: 90

ಕನ್ನಡ ಕರಾವಳಿ ಸುದ್ದಿ: ವಿದ್ಯಾರ್ಥಿಯನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಲು ಸಿದ್ದಾಪುರ ಪ್ರಾಥಮಿಕ ಶಾಲೆಯ ಬಳಿ ತಂದೆಯ ಜತೆಯಲ್ಲಿ ಬೈಕಿನಲ್ಲಿ ಕುಳಿತಿರುವಾಗ ಟಿಪ್ಪರ್‌ ಚಾಲಕ ಅತೀ ವೇಗವಾಗಿ ಬಂದು ಬೈಕಿಗೆ ಢಿಕ್ಕಿ ಹೊಡೆದಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಿದ್ದಾಪುರ ಮಕ್ಕಿಮನೆ ರಾಘವೇಂದ್ರ ಪೂಜಾರಿ (38) ಅವರು ತಂದೆ ಕೃಷ್ಣ ಪೂಜಾರಿ ಕೆಳಪೇಟೆಯ ಅವರನ್ನು ತನ್ನ ಬೈಕಿನಲ್ಲಿ ಮನೆಯಿಂದ ಕುಳ್ಳಿರಿಸಿಕೊಂಡು ಬಂದು ಶಾಲೆಯ ಬಳಿ ನಿಂತುಕೊಂಡಿದ್ದರು. ಸಂದರ್ಭದಲ್ಲಿ ಅತೀ ವೇಗವಾಗಿ ಬಂದ ಟಿಪ್ಪರ್‌ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದು, ಗಾಯಗೊಂಡರು. ಗಂಭೀರವಾಗಿ ಗಾಯಗೊಂಡ ಕೃಷ್ಣ ಪೂಜಾರಿ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!