ಇತರೆ
ಕೋಟೇಶ್ವರದಲ್ಲಿ ಪಂಚಾಯತ್ ಕಸ ದಾಸ್ತಾನು ಕಟ್ಟಡಕ್ಕೆ ಬೆಂಕಿ :ಅಂಗಡಿಗಳಿಗೆ ಹಾನಿ
Views: 121
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಪಂಚಾಯತ್ ಕಾರ್ಯಾಲಯದ ಪಕ್ಕದಲ್ಲಿರುವ ಪ್ರಥಮ ಅಂತಸ್ತಿನ ಕಟ್ಟಡದಲ್ಲಿ ಒಣ ಕಸ ತ್ಯಾಜ್ಯಕ್ಕೆ ಬೆಂಕಿ ತಗುಲಿ ಕಟ್ಟಡದ ಕೆಳಭಾಗದಲ್ಲಿರುವ ಅಂಗಡಿಗಳಿಗೆ ಹಾನಿ ಸಂಭವಿಸಿದೆ.
ರವಿವಾರ ಮುಂಜಾನೆ ನಾಲ್ಕು ಗಂಟೆ ಹೊತ್ತಿಗೆ ತ್ಯಾಜ್ಯ ರಾಶಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಆಸುಪಾಸಿನ ನಿವಾಸಿಗಳಿಗೆ ಆತಂಕ ಸೃಷ್ಟಿಯಾಗಿತ್ತು, ಪ್ಲಾಸ್ಟಿಕ್ ಕಸ ಸುಟ್ಟ ದುರ್ವಾಸನೆ ಮತ್ತು ಹೊಗೆ ಇಡೀ ಪೇಟೆಗೆ ಆವರಿಸಿದ್ದು, ವಾಹನಸವಾರರು, ಆಸುಪಾಸಿನವರಿಗೆ, ತಿರುಗಾಡದ ಸ್ಥಿತಿ ನಿರ್ಮಾಣವಾಗಿದ್ದರಿಂದ ಪಂಚಾಯತ್ ಬೇಜವಾಬ್ದಾರಿತನಕ್ಕೆ ಜನರು ಹಿಡಿ ಶಾಪ ಹಾಕಿದ್ದಾರೆ.
ಕಟ್ಟಡದ ಒಳಗೆ ಉರಿಯುತ್ತಿರುವ ಬೆಂಕಿಯ ಕೆನ್ನಾಲಿಗೆ ಆವರಿಸದಂತೆ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ನಿರತರಾಗಿದ್ದಾರೆ.








