ಜನಮನ

ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ ಖತರ್ನಾಕ್ ಮಹಿಳೆ ಅರೆಸ್ಟ್ !

Views: 143

ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ರಾಮಮೂರ್ತಿನಗರದ ನಿವಾಸಿ ಸಂಜನಾ ಅಲಿಯಾಸ್ ವನಜಾ ರಾಮಮೂರ್ತಿ ನಗರ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಲವ್ ಮಾಡುವಂತೆ ಲವ್ ಲೇಟರ್ ಬರೆದು ಪ್ರೀತಿಸುವಂತೆ ಕಾಡಿದ್ದಳು. ಇದರಿಂದ ಕರ್ತವ್ಯಕ್ಕೆ ಅಡ್ಡಿ, ಆತ್ಮಹತ್ಯೆ ಬೆದರಿಕೆ ಆರೋಪದ ಅಡಿ ಪ್ರಕರಣ ದಾಖಲಿಸಿ ಸಂಜನಾಳನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಲಾಗಿದೆ.

ಇದರ ಬೆನ್ನಲ್ಲೇ ಆರೋಪಿತೆ ಸಂಜನಾ ಹಿನ್ನೆಲೆ ಪರಿಶೀಲಿಸಿದಾಗ ಪೊಲೀಸರನ್ನೇ ಚಕಿತಗೊಳಿಸುವ ಮಾಹಿತಿಗಳು ಬೆಳಕಿಗೆ ಬಂದಿದೆ.

ಇದೇ ಸಂಜನಾ 2 ವರ್ಷಗಳ ಹಿಂದೆ ಕಂಟ್ರ್ಯಾಕ್ಟ‌ರ್ ಸತೀಶ್ ರೆಡ್ಡಿ ಎಂಬುವವರನ್ನು ಪರಿಚಯ ಮಾಡಿಕೊಂಡು, ಅವರನ್ನು ಮನೆಗೆ ಊಟಕ್ಕೆ ಕರೆದ ಸಂಜನಾ ಅವರ ಜತೆ ದೈಹಿಕ ಸಂಪರ್ಕ ಬೆಳಸಿ ಅದರ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದರು. ಸತೀಶ್ ರೆಡ್ಡಿ ಬಳಿಯಿದ್ದ ಚಿನ್ನದ ಉಂಗುರ, ಸರ, ಮೂರು ಲಕ್ಷ ರೂ. ನಗದು ಕಸಿದುಕೊಂಡಿದ್ದಾಳೆ ಎಂದು ಇದೇ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.

ಅದರ ಜತೆಗೆ ಸತೀಶ್ ರೆಡ್ಡಿಗೆ ಸೇರಿದ 2 ಅಂತಸ್ತಿನ ಕಟ್ಟಡವನ್ನು ನನ್ನ ಹೆಸರಿಗೆ ಬರೆದು ಕೊಡು ಎಂದು ಕಿರುಕುಳ ನೀಡಿದ ಆರೋಪದಲ್ಲಿ ಕೆ.ಆ‌ರ್.ಪುರ ಪೊಲೀಸ್ ಠಾಣೆಯಲ್ಲೂ ಸಂಜನಾ ವಿರುದ್ಧ ಎಫ್ ಐಆರ್ ದಾಖಲಾಗಿದೆ.

2018 ರಲ್ಲಿ ಹೆಡ್ ಕಾನ್ಸ್‌ ಸ್ಟೇಬಲ್ ಜಗದೀಶ್ ಎಂಬುವವರು ನನ್ನ ಮದುವೆ ಮಾಡಿಕೊಳ್ಳುವೆ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ್ದಾರೆ ಎಂದು ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್‌ ವಿರುದ್ಧ ದೂರು ನೀಡಿದ್ದಾಳೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಸುಳ್ಳು ಆರೋಪ ಎಂದು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ.ಅಷ್ಟೇ ಅಲ್ಲದೇ ತನಿಖೆ ವೇಳೆ ಇದೇ ರೀತಿ ಹಲವರಿಗೆ ಹನಿಟ್ರ್ಯಾಪ್ ಮಾಡಿರೋದು, ಅಧಿಕಾರಿಗಳ ಪರಿಚಯ ಮಾಡಿಕೊಂಡು ಅವರ ಹೆಸರಿನಲ್ಲಿ ಹಲವರಿಗೆ ಮೋಸ ಮಾಡಿರುವುದು ಕೂಡ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

Related Articles

Back to top button