ಜನಮನ

ಕಾರವಾರ ನೌಕಾನೆಲೆಯಲ್ಲಿ ಸೀಗಲ್ ಹಕ್ಕಿಯ ಬೆನ್ನ ಮೇಲೆ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆ: ಚೀನಾ ಗೂಢಚರ್ಯೆ ಶಂಕೆ?

Views: 184

ಕನ್ನಡ ಕರಾವಳಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಗೆ ಸಮೀಪವಿರುವ ತಿಮ್ಮಕ್ಕ ಗಾರ್ಡನ್ ಹಿಂಭಾಗದಲ್ಲಿ ಕೂತಿದ್ದ ಸೀಗಲ್ ಹಕ್ಕಿಯ ಬೆನ್ನಿನ ಭಾಗದಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆಯಾಗಿದೆ. ಇದರಿಂದ ನೌಕಾನೆಲೆಯ ಬಗ್ಗೆ ಚೀನಾ ಗೂಢಚರ್ಯೆ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ.

ನೋಡಲು ಭಿನ್ನವಾಗಿ ಕಂಡ ಈ ಹಕ್ಕಿಯನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಯ ಮರೈನ್ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅಧಿಕಾರಿಗಳು ಹಕ್ಕಿಯನ್ನು ಹಿಡಿದು ಪರಿಶೀಲಿಸಿದ್ದಾರೆ. ಈ ವೇಳೆ ಸೀಗಲ್‌ನ ಬೆನ್ನಿನಲ್ಲಿದ್ದ ಜಿಪಿಎಸ್‌ನಲ್ಲಿ ಚೈನೀಸ್ ವಿಜ್ಞಾನ ಅಕಾಡೆಮಿಯ ರಿಸರ್ಚ್ ಸೆಂಟರ್ ಫಾರ್ ಇಕೋ-ಎನ್ವಿರಾನೆಂಟಲ್ ಸೈನ್ಸ್ ವಿಳಾಸ ಪತ್ತೆಯಾಗಿದೆ. ಸೀಗಲ್ ಹಕ್ಕಿಗಳ ಚಲನ ವಲನ, ಆಹಾರ ಹಾಗೂ ವಲಸೆಯನ್ನು ಗುರುತಿಸಲು ಜಿಪಿಎಸ್ ಟ್ರ್ಯಾಕರ್ ಬಳಸಲಾಗಿದೆ.

ಕಳೆದ ವರ್ಷ ನವಂಬರ್‌ನಲ್ಲೂ ಕಾರವಾರ ಬೈತಕೋಲ್ ಬಂದರಿನ ಸರಹದ್ದು ವ್ಯಾಪ್ತಿಯಲ್ಲಿ ಟ್ರ್ಯಾಕರ್ ಅಳವಡಿಸಿದ ರಣಹದ್ದು ಪ್ರತ್ಯಕ್ಷವಾಗಿತ್ತು. ಹದ್ದಿನ ಮೇಲೆ ಕಂಡು ಬಂದ ಟ್ರ್ಯಾಕರ್ ಕೂಡ ಚೀನಾ ನಿರ್ಮಿತವಾಗಿತ್ತು.

Related Articles

Back to top button