ಇತರೆ

ಸ್ನಾನಕ್ಕೆ ಹೋಗಿದ್ದಾಗ ಬಾತ್ ರೂಮ್‌ನಲ್ಲಿ ಗೀಸರ್ ಗ್ಯಾಸ್ ಸೋರಿಕೆ; ತಾಯಿ‌ – ಮಗು ಸಾವು

Views: 122

ಕನ್ನಡ ಕರಾವಳಿ ಸುದ್ದಿ: ಬಾತ್ ರೂಮ್‌ನಲ್ಲಿ ಗೀಸರ್ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥಗೊಂಡಿದ್ದ ತಾಯಿ ಮತ್ತು ಮಗು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗೋವಿಂದರಾಜ ನಗರ ವ್ಯಾಪ್ತಿಯ ಪಂಚಶೀಲ ನಗರದಲ್ಲಿ ಸೋಮವಾರ ಈ ಘಟನೆ ನಡೆದಿದೆ.

ತಾಯಿ ಚಾಂದಿನಿ (26) ಹಾಗೂ ಮಗು ಯುವಿ (4) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ‌ ಮೃತಪಟ್ಟಿದ್ದಾರೆ.

ತಾಯಿ ಮತ್ತು ಮಗು ನಿನ್ನೆ ಮಧ್ಯಾಹ್ನ ಸ್ನಾನಕ್ಕೆಂದು ಹೋದಾಗ ಗೀಸರ್‌ನಿಂದ ಸೋರಿಕೆಯಾಗಿದ್ದ ಗ್ಯಾಸ್ ಸೇವಿಸಿ ಅಸ್ವಸ್ಥಗೊಂಡಿದ್ದರು. ತೀವ್ರವಾಗಿ ಅಸ್ವಸ್ಥರಾಗಿದ್ದ ತಾಯಿ ಮಗುವನ್ನು ಅಕ್ಕಪಕ್ಕದ ಮನೆಯವರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಸಂಜೆ ವೇಳೆಗೆ ತಾಯಿ‌ – ಮಗು ಇಬ್ಬರೂ ಸಾವನ್ನಪ್ಪಿದ್ದಾರೆ.

Related Articles

Back to top button
error: Content is protected !!