ಇತರೆ

ಕುಂದಾಪುರ: ಕೋಟೇಶ್ವರದಲ್ಲಿ ಶಿಕ್ಷಕಿಯೊಬ್ಬರ ಮನೆಯಲ್ಲಿ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು 

Views: 630

ಕನ್ನಡ ಕರಾವಳಿ ಸುದ್ದಿ : ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಶಿಕ್ಷಕಿಯೊಬ್ಬರ ಮನೆಯ ಕಾಪಾಟಿನಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಕಳವಾಗಿರುವ ಬಗ್ಗೆ ವರದಿಯಾಗಿದೆ.

ಕೋಟೇಶ್ವರ ಆಟಕೆರೆ ಬಟ್ಟೆ ಅಂಗಡಿ ಎದುರಿನ ನಿವಾಸಿ, ಬಿದಲ್ ಕಟ್ಟೆಯ ಕೆಪಿಎಸ್ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಪೂಜಾ ಕಿಣಿ ಎಂಬವರು ಮನೆಯ ಗೊದ್ರೇಜ್ ನಲ್ಲಿ Riddhiಎಂಬ ಹೆಸರಿನ ಚಿನ್ನದ ಬ್ರಾಸ್‌ ಲೈಟ್‌, ಪವನ ಸರ, ಕೆಂಪು ಕಲ್ಲು ಮುತ್ತಿನ ಸೂರ್ಯಪೆಂಡೆಂಟ್‌, ಸಿಂಗಲ್‌ ಸ್ಕ್ರೂ ಬಳೆ, ಜುಮ್ಕಿ ಬಳೆ, ಕರಿಮಣಿ ನೆಕ್ಲೆಸ್‌ ,ಗೋಲ್ಡನ್‌ ಸಟೋನ್‌ ಪೆಂಡೆಂಟ್‌, ವೆಂಕಟರಮಣ ಪೆಂಡೆಂಟ್‌,ಡಿ ಸಿ ಚೈನ್‌ ,ನೆಕ್ಲೆಸ್‌ ,ಹಸಿರು ಗುಲಾಬಿ ಕಲ್ಲಿನ ಪೆಂಡೆಂಟ್‌, ಸಣ್ಣ ಹವಳದ ಸರ, ವಜ್ರದ ಮೂಗುಬೊಟ್ಟು,-2 ಇವುಗಳನ್ನು ಮನೆಯ ಗೊದ್ರೇಜ್‌ ನಲ್ಲಿ ಇರಿಸಿ ಬೀಗ ಹಾಕಿ ಬೀಗವನ್ನು ಅಲ್ಲಿಯೇ ಇಟ್ಟು ಹೋಗಿದ್ದು

ಅವರು ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋಗಲು ಗೊದ್ರೇಜ್ ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ನೋಡುವಾಗ ಕೆಲವು ಚಿನ್ನಾಭರಣಗಳು ಇಲ್ಲದಿರುವುದು ಗಮನಕ್ಕೆ ಬಂತು.

ಇವುಗಳನ್ನು ಲಾಕರ್ ನಲ್ಲಿ ಇಟ್ಟಿರಬಹುದೆಂದು ಭಾವಿಸಿದ ಅವರು, 2025ರ ಜೂ.26ರಂದು ಕಾರ್ಯಕ್ರಮಕ್ಕೆ ಹೋಗಲು ಕಾಪಾಟಿನ ಬೀಗವನ್ನು ತೆರೆದು ನೋಡಿದಾಗ ಅದರಲ್ಲಿ ಇಟ್ಟಿದ್ದ ಚಿನ್ನಾಭರಣಗಳ ಪೈಕಿ ಒಟ್ಟು ಸುಮಾರು 23 ಪವನ್ ಚಿನ್ನಾಭರಣಗಳು ಕಳವು ಆಗಿರುವುದು ಕಂಡುಬಂದಿದೆ. ಇವುಗಳ ಒಟ್ಟು ಮೌಲ್ಯ 18 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

Related Articles

Back to top button
error: Content is protected !!