ಶಿಕ್ಷಣ
ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮ್ಯಾತ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್ ಶಿಪ್ ಗರಿ
Views: 47
ಕನ್ನಡ ಕರಾವಳಿ ಸುದ್ದಿ: ಗುರು ಅಬಾಕಸ್ ಮತ್ತು ವೇದಿಕ್ ಮ್ಯಾತ್ಸ್ ಸೆಂಟರ್ ಪುಣೆ,ಮಹಾರಾಷ್ಟ್ರ ಇದರ ವತಿಯಿಂದ ಇತ್ತೀಚೆಗೆ ಆಯೋಜಿಸಲಾದ ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮ್ಯಾತ್ಸ್ ಸ್ಪರ್ಧೆಯಲ್ಲಿ ಮದರ್ ತೆರೇಸಾ ಶಾಲೆಯ 6 ಮಂದಿ ವಿದ್ಯಾರ್ಥಿಗಳು ಚಾಂಪಿಯನ್ ಶಿಪ್ ಪಡೆದಿದ್ದಾರೆ.
ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ. 1. ಶ್ರೀದೇವಿ ಶೆಟ್ಟಿ 7ನೇ ತರಗತಿ 2.ಆರಾಧ್ಯ ಎಮ್ 7ನೇ ತರಗತಿ 3.ಆಶ್ರಿತ್ ಕುಲಾಲ್ 7ನೇ ತರಗತಿ. 4. ವಿಘ್ನೇಶ್ ನಾಯ್ಕ್ 6ನೇ ತರಗತಿ. 5.ಪವನ್ ಉಡುಪ 6ನೇ ತರಗತಿ 6. ಹನಿ 6ನೇ ತರಗತಿ 7. ಮನ್ವಿತ್ ಜಿ 6ನೇ ತರಗತಿ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಕೀರ್ತಿ ಹೆಚ್ಚಿಸಿರುವ ಈ ಹೆಮ್ಮೆಯ ವಿದ್ಯಾರ್ಥಿಗಳ ಸಾಧನೆಗೆ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ,ಶಾಲಾ ಮುಖ್ಯೋಪಾಧ್ಯಾಯಿನಿ , ಉಪ ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿ,ಫಲಪ್ರದ ಭವಿಷ್ಯ ಹಾರೈಸಿದ್ದಾರೆ.






