ಶಿಕ್ಷಣ

ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ಪ್ರಿಯಾಂಶ್ ಶಂಕರ್ ಗೆ ಚಿನ್ನದ ಪದಕ 

Views: 373

ಕನ್ನಡ ಕರಾವಳಿ ಸುದ್ದಿ:  ಗುರು ಅಬಾಕಸ್ ಮತ್ತು ವೇದಿಕ್ ಮ್ಯಾತ್ ಸೆಂಟರ್ ಪುಣೆ,ಮಹಾರಾಷ್ಟ್ರ ಇವರಿಂದ ಆಯೋಜಿಸಲ್ಪಟ್ಟ ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಪರೀಕ್ಷೆಯಲ್ಲಿ ಮದರ್ ತೆರೇಸಾ ಶಾಲೆ ಶಂಕರನಾರಾಯಣ, ಇಲ್ಲಿನ ಮೂರನೇ ತರಗತಿಯ ವಿದ್ಯಾರ್ಥಿ ಪ್ರಿಯಾಂಶ್ ಶಂಕರ್ ನಾಯ್ಕ್  ಚಿನ್ನದ ಪದಕ ಪಡೆದು ವಿದ್ಯಾ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಈ ಪ್ರತಿಭಾನ್ವಿತ ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರು ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಆತನ ಮುಂದಿನ ಸಾಧನೆಗೆ ಶುಭ ಹಾರೈಸಿದ್ದಾರೆ.

Related Articles

Back to top button
error: Content is protected !!