ಸಾಂಸ್ಕೃತಿಕ

‘ಪಾತ್ರಧಾರಿ’ ಸಿನಿಮಾ ಶೂಟಿಂಗ್ ವೇಳೆ ಕುಸಿದು ಬಿದ್ದು  ನಿರ್ದೇಶಕನ ಸಾವು

Views: 164

ಕನ್ನಡ ಕರಾವಳಿ ಸುದ್ದಿ:  ಸಂಗೀತ್ ಸಾಗರ್ ಶಿವಮೊಗ್ಗದಲ್ಲಿ ‘ಪಾತ್ರಧಾರಿ’ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಇಡೀ ತಂಡ ಅಲ್ಲಿ ಬೀಡು ಬಿಟ್ಟಿತ್ತು. ಈ ವೇಳೆ ಅವರು ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸದ್ಯ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿಯೇ ಸಾಗರ್ ಮೃತದೇಹವನ್ನು ಇಡಲಾಗಿದೆ.

ಸಂಗೀತ್ ಸಾಗರ್ ಶಿವಮೊಗ್ಗ ಕೊಪ್ಪದಲ್ಲಿ ‘ಪಾತ್ರಧಾರಿ’ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಇಡೀ ತಂಡ ಅಲ್ಲಿ ಬೀಡು ಬಿಟ್ಟಿತ್ತು. ಈ ವೇಳೆ ಅವರು ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸದ್ಯ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿಯೇ ಸಾಗರ್ ಮೃತದೇಹವನ್ನು ಇಡಲಾಗಿದೆ.

ಈ ಮೊದಲು ‘ಸ್ನೇಹಿತ’ ಹೆಸರು 2021ರಲ್ಲು ರಿಲೀಸ್ ಆಯಿತು. ‘ಓ ಪ್ರೀತಿಯಾ’ ಹೆಸರಿನ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ಕೆಲವು ಸಿನಿಮಾಗಳಿಗೆ ಸಂಗೀತ ಸಂಯೋಜಕನಾಗಿ ಕೆಲಸ ಮಾಡಿದ್ದಾರೆ.

ಸಾಗರ್ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸಾಗರ್ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದಾರೆ. ಸಿನಿಮಾದ ನಿರ್ಮಾಪಕರು ಹಾಗೂ ಚಿತ್ರತಂಡ ಆಸ್ಪತ್ರೆಗೆ ಇನ್ನಷ್ಟೇ ಭೇಟಿ ನೀಡುವ ಸಾಧ್ಯತೆ ಇದೆ.

Related Articles

Back to top button
error: Content is protected !!