ಇತರೆ

ಬೈಂದೂರಿನ ಉಪ್ಪುಂದದಲ್ಲಿ ಮೀನುಗಾರರ ಬಲೆಗೆ ಬಿದ್ದ350 ಕೆ.ಜಿ. ತೂಕದ  ಬೃಹತ್ ಗಾತ್ರದ ಮಡಲು ಮೀನು 

Views: 246

ಕನ್ನಡ ಕರಾವಳಿ ಸುದ್ದಿ : ಬೈಂದೂರು ಸಮೀಪ ಉಪ್ಪುಂದದಲ್ಲಿ ಮೀನುಗಾರರ ಬಲೆಗೆ ಸುಮಾರು 350 ಕೆ.ಜಿ. ತೂಕದ ಬೃಹತ್ ಗಾತ್ರದ ಮಡಲು ಮೀನು ಬಿದ್ದಿದೆ.

ಗಿಲ್‌ನೆಟ್ ಮೀನುಗಾರರ ಬಲೆಗೆ ಬಿದ್ದ ಈ ಮೀನನ್ನು ಮಲ್ಪೆ ಬಂದರಿಗೆ ತರಲಾಯಿತು. ಸುಮಾರು 13 ಅಡಿ ಉದ್ದದ ಈ ಮೀನು 350 ಕೆಜಿ ತೂಕವನ್ನು ಹೊಂದಿದೆ.

ಇದನ್ನು ಕೆ.ಜಿ.ಗೆ 70ರೂ.ನಂತೆ ಕೇರಳದ ಮೀನು ವ್ಯಾಪಾರಿಗಳಿಗೆ ಮಾರಾಟ ಮಾಡಲಾಯಿತು. ಸ್ಥಳೀಯವಾಗಿ ಮಡಲು ಎಂದು ಮತ್ತು ಕೇರಳದಲ್ಲಿ ಕಟ್ಟಕಂಬ ಎಂದು ಈ ದೈತ್ಯ ಮೀನನ್ನು ಕರೆಯಲಾಗುತ್ತದೆ. ಮಲೆನಾಡು ಪ್ರದೇಶ ಮತ್ತು ಕೇರಳದಲ್ಲಿ ಈ ಜಾತಿಯ ಮೀನಿಗೆ ಹೆಚ್ಚಿನ ಬೇಡಿಕೆ ಇದೆ.

Related Articles

Back to top button
error: Content is protected !!