ನೀರಿಗೆ ಬಿದ್ದಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹುಡುಕಿಕೊಟ್ಟ ಮುಳುಗುತಜ್ಞ ಈಶ್ವರ್ ಮಲ್ಪೆ
Views: 247
ಕನ್ನಡ ಕರಾವಳಿ ಸುದ್ದಿ: ಮಲ್ಪೆಯ ಮುಳುಗುತಜ್ಞ ಈಶ್ವರ್ ಮಲ್ಪೆ ಅವರು ನೀರಲ್ಲಿ ಬಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ಹುಡುಕಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸುಮಾರು 20 ಅಡಿ ಆಳದಲ್ಲಿ ಕೆರೆ ನೀರಿಗೆ ಬಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಇರುವ ಚೀಲವನ್ನು ಮೇಲಕ್ಕೆತ್ತಿದ ಈಶ್ವರ್ ಮಲ್ಪೆ ಅವರ ತಂಡ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಬೇಲೂರು ರಸ್ತೆ ಮಾರ್ಗದಲ್ಲಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದನದಿಗೆ ಸೋಮವಾರ ಬೆಳಗ್ಗೆ ಉರುಳಿತ್ತು. ಅದರಲ್ಲಿದ್ದ ಜ್ಯುವೆಲ್ಲರಿ ಮಾಲಕ ಈಜಿ ದಡ ಸೇರಿದ್ದರು. ಕಾರನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು. ಆದರೆ ಕಾರಿನಲ್ಲಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಚೀಲ ನೀರಿಗೆ ಬಿದ್ದಿತ್ತು. ಕೂಡಲೇ ಈಶ್ವರ್ ಮಲ್ಪೆಗೆ ಕರೆ ತಿಳಿಸಲಾಯಿತು.
ಸ್ಥಳಕ್ಕಾಗಮಿಸಿದ ಈಶ್ವರ್ ಮಲ್ಪೆ, ಕಾರು ಬಿದ್ದಿದ್ದ ಸ್ಥಳಕ್ಕೆ ಬ್ಯಾಟರಿಯೊಂದಿಗೆ ಇಳಿದು ಹುಡುಕಾಟ ನಡೆಸಿದರು. ಮಳೆಯಿಂದಾಗಿ ನದಿ ನೀರು ಕೆಂಪುಮಯವಾಗಿತ್ತು. ಹುಡುಕಾಟಕ್ಕೆ ತುಸು ತೊಂದರೆಯಾದರೂ ನದಿಯ ಅಳದಲ್ಲಿ ಬಿದ್ದಿದ್ದ ಆಭರಣವಿದ್ದ ಚೀಲವನ್ನು ಕೇವಲ 15 ನಿಮಿಷದಲ್ಲಿ ಪತ್ತೆ ಮಾಡಿ ಮೇಲಕ್ಕೆ ತಂದು ಮಾಲೀಕರಿಗೆ ಹಸ್ತಾಂತರಿಸಿದರು..






