ಇತರೆ

ಸೇನಾಧಿಕಾರಿಯಂತೆ ನಟಿಸಿ ಅಮೆಜಾನ್‌ ಡೆಲಿವರಿ ಬಾಯ್  ವೈದ್ಯೆಯ ಮೇಲೆ ಅತ್ಯಾಚಾರ

Views: 152

ಕನ್ನಡ ಕರಾವಳಿ ಸುದ್ದಿ: ಸೇನಾ ಅಧಿಕಾರಿ ಎಂದು ನಂಬಿಸಿದ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳ ಮೂಲಕ ವೈದ್ಯೆಯೊಬ್ಬಳನ್ನು ವಂಚಿಸಿ, ಸ್ನೇಹ ಬೆಳೆಸಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಛತ್ತರ್‌ಪುರ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಅಮೆಜಾನ್‌ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಆರವ್ ಮಲಿಕ್, ತಾನು ಭಾರತೀಯ ಸೇನಾ ಲೆಫ್ಟಿನೆಂಟ್‍ ಎಂದು ನಟಿಸಿದ್ದಾನೆ. ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆಸಿ ವಂಚಿಸಿದ್ದಾನೆ. ಅಧಿಕಾರಿಗಳ ಪ್ರಕಾರ, ಮಲಿಕ್ ಇನ್‌ಸ್ಟಾಗ್ರಾಮ್‌ನಲ್ಲಿ 27 ವರ್ಷದ ವೈದ್ಯೆಯೊಂದಿಗೆ ಸ್ನೇಹ ಬೆಳೆಸಿಕೊಂಡನು. ನಂತರ ವಾಟ್ಸಾಪ್ ಸಂಖ್ಯೆ ಪಡೆದುಕೊಂಡು ಅವಳೊಂದಿಗೆ ಮತ್ತಷ್ಟು ಹತ್ತಿರವಾಗಿದ್ದಾನೆ.

ಏಪ್ರಿಲ್ 30 ಮತ್ತು ಸೆಪ್ಟೆಂಬರ್ 27 ರ ನಡುವೆ, ಅವನು ಕಾಶ್ಮೀರದಲ್ಲಿ ನಿಯೋಜಿತ ಸೇನಾ ಅಧಿಕಾರಿಯಂತೆ ನಟಿಸಿದ್ದಾನೆ. ತನ್ನ ಹೇಳಿಕೆಯನ್ನು ನಂಬಿಸುವ ಸಲುವಾಗಿ ಅವನು ಮಿಲಿಟರಿ ಸಮವಸ್ತ್ರ ಧರಿಸಿದ ತನ್ನ ಫೋಟೋಗಳನ್ನು ವೈದ್ಯಗೆ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅಕ್ಟೋಬರ್‌ ತಿಂಗಳಿನಲ್ಲಿ ಮಲಿಕ್, ಮಸೀದಿ ಮಾತ್ ಪ್ರದೇಶದಲ್ಲಿರುವ ವೈದ್ಯೆಯ ನಿವಾಸಕ್ಕೆ ಭೇಟಿ ನೀಡಿದ್ದಾನೆ. ಮಾದಕ ದ್ರವ್ಯ ಸೇವಿಸಿದ ಆರೋಪಿಯು ವೈದ್ಯೆಯ ಮೇಲೆ ಅತ್ಯಾಚಾರಗೈದು, ಹಲ್ಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

 

Related Articles

Back to top button
error: Content is protected !!