ಇತರೆ

ಬಸ್ ದುರಂತದಲ್ಲಿ ಸಾವನ್ನಪ್ಪಿದ ಈ ಮೂವರು ಸಾಫ್ಟ್‌ವೇ‌ರ್ ಎಂಜಿನಿಯ‌ರ್ ಗಳು ಸಾವು

Views: 149

ಕನ್ನಡ ಕರಾವಳಿ ಸುದ್ದಿ: ಆಂಧ್ರ ಪ್ರದೇಶದ ಕರ್ನೂಲ್ ನಲ್ಲಿ ನಡೆದ ಬಸ್ ದುರಂತದಲ್ಲಿ 20 ಜನ ಸಾವನ್ನಪ್ಪಿದ್ದು, ಈ ಮೂವರು ಯುವತಿಯರು ಕೂಡ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಮೂವರು ಯುವತಿಯರು ಸಾಫ್ಟ್‌ವೇ‌ರ್ ಎಂಜಿನಿಯ‌ರ್ ಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಮೃತ ದುರ್ದೈವಿಗಳನ್ನು ಅನುಷಾ ರೆಡ್ಡಿ (22), ಗನ್ನಮನೇನಿ ಧಾತ್ರಿ (27) ಹಾಗೂ ಚಂದನಾ (23) ಎಂದು ಗುರುತಿಸಲಾಗಿದೆ.

ಬಾಪಟ್ಟ ಜಿಲ್ಲೆಯ ಗನ್ನಮನೇನಿ ಧಾತ್ರಿ ಅವರು ಮಾವನ ಮನೆಯಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದ ವೇಳೆ ಬಸ್ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇವರು ಬೆಂಗಳೂರಿನಲ್ಲಿ ಟೆಕ್ಕಿ ಆಗಿ ಕೆಲಸ ಮಾಡುತ್ತಿದ್ದರು

ಟೆಕ್ಕಿ ಅನುಷಾ ರೆಡ್ಡಿ ಮೂಲತಃ ಯದಾದ್ರಿ ಭುವನಗಿರಿ ಜಿಲ್ಲೆಯ ವಸ್ತಕೊಂಡೂರು ಗ್ರಾಮದವರು. ಈಕೆ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ದೀಪಾವಳಿ ಹಬ್ಬ ಮುಗಿಸಿ ಬರುತ್ತಿದ್ದ ಅನುಷಾ ಇಂದು ಬೆಳಗ್ಗಿನ ಜಾವ ಸಂಭವಿಸಿದ ದುರಂತದಲ್ಲಿ ಮೃತಪಟ್ಟಿದ್ದಾರೆ.

ಇನ್ನು ಮೆದಕ್ ಜಿಲ್ಲೆಯ ಚಂದನಾ ಅವರು ತಾಯಿ ಸಂಧ್ಯಾ ಅವರ ಜೊತೆ ಬೆಂಗಳೂರಿಗೆ ಬರುತ್ತಿದ್ದರು. ಗಂಡನ ಜೊತೆ ದುಬೈನಲ್ಲಿ ನೆಲೆಸಿದ್ದ ಸಂಧ್ಯಾ ಅವರು ಮಗಳನ್ನು ಬೆಂಗಳೂರಿನಲ್ಲಿ ಬಿಟ್ಟು ಹೋಗಲು ಆಗಮಿಸುತ್ತಿದ್ದರು. ಆದರೆ ಬಸ್ ದುರಂತದಲ್ಲಿ ತಾಯಿ-ಮಗಳು ಇಬ್ಬರೂ ಮೃತಪಟ್ಟಿದ್ದಾರೆ.

Related Articles

Back to top button