ಇತರೆ

ಅಲ್ಪಾಡಿಯಲ್ಲಿ ಗುಡ್ಡಕ್ಕೆ ದನ ಮೇಯಿಸಲು ಹೋದ ಮಹಿಳೆ ಸಾವು

Views: 127

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಅಲ್ಪಾಡಿಯಲ್ಲಿ ಗುಡ್ಡಕ್ಕೆ ದನ ಮೇಯಿಸಲು ಹೋದ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ನಡೆದಿದೆ.

ಅಲ್ಪಾಡಿ ಗ್ರಾಮದ ಕೊಂಜಾಡಿ ಗಿರಿಜ ಆಚಾರ್ಯ (62) ಮೃತಪಟ್ಟ ಮಹಿಳೆ

ಮನೆ ಸಮೀಪದ ಗುಡ್ಡಕ್ಕೆ ದನಗಳನ್ನು ಮೇಯಲು ಅ. 23ರ ಬೆಳಿಗ್ಗೆ ಬಿಟ್ಟು ಮನೆಗೆ ಮರಳಿದ್ದರು. ಸಂಜೆ ಸಮಯದಲ್ಲಿ ದನಗಳನ್ನು ತರಲು ಗುಡ್ಡಕ್ಕೆ ಹೋದವರು, ಮನೆಗೆ ವಾಪಸು ಬಂದಿರುವುದಿಲ್ಲ. ಮನೆಯವರು ಹಾಗೂ ಅಕ್ಕಪಕ್ಕದವರು ದನ ಮೇಯಲು ಬಿಟ್ಟ ಗುಡ್ಡದ ಕಡೆಗೆ ಹುಡುಕಲು ಹೋಗಿದ್ದು, ರಾತ್ರಿ ಸಮಯದಲ್ಲಿ ಗುಡ್ಡದ ಸಮೀಪದ ರಬ್ಬರ್‌ತೋಟದಲ್ಲಿ ತೀವ್ರ ಅಸ್ವಸ್ಥರಾಗಿ, ಮಲಗಿರುವುದು ಕಂಡು ಬಂದಿದೆ.

ಕೂಡಲೇ ಆ್ಯಂಬುಲೆನ್ಸ್ ಮುಖಾಂತರ ಹೆಬ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಯಿತು. ಪರೀಕ್ಷಿಸಿದ ವೈದ್ಯರು ಮೃತಪಟ್ವಿರುದಾಗಿ ತಿಳಿಸಿದರು. ಪುತ್ರ ನಾಗೇಶ ಆಚಾರ್ಯ ಅವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button