ಬಸ್ರೂರು ಶ್ರೀ ಶಾರದಾ ಕಾಲೇಜು: ಬೃಹತ್ ರಕ್ತದಾನ ಶಿಬಿರ
Views: 56
ಕನ್ನಡ ಕರಾವಳಿ ಸುದ್ದಿ: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿನ ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎನ್ ಸಿ ಸಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಏನ್ ಸಿ ಡಿ ವಿಭಾಗ ಸಾರ್ವಜನಿಕ ಆಸ್ಪತ್ರೆ ಕುಂದಾಪುರ , ಪ್ರಾಥಮಿಕ ಆರೋಗ್ಯ ಕೇಂದ್ರ ಬಸ್ರೂರು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಪ್ರಸಾದ್ ನೇತ್ರಾಲಯ ಉಡುಪಿ, ಆಟೋರಿಕ್ಷಾ ಚಾಲಕರು ಮಾಲಕರ ಸಂಘ ಬಸ್ರೂರು, ರಥ ಬೀದಿ ಫ್ರೆಂಡ್ಸ್ ಬಸ್ರೂರು , ಬಸ್ರೂರು ಸ್ಪೋರ್ಟ್ಸ್ ಕ್ಲಬ್, ಮ ಮಹೀಶಾ ಮರ್ದಿನಿ ಮೊಗವೀರ ಯುವಕ ಮಂಡಲ ಬಸ್ರೂರು, ನ್ಯೂ ಸ್ಪೋರ್ಟ್ಸ್ ಕ್ಲಬ್ ಬಳ್ಕೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಬೃಹತ್ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶ್ರೀ ಜಯಕರ್ ಶೆಟ್ಟಿ ಅಧ್ಯಕ್ಷರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕುಂದಾಪುರ ಉದ್ಘಾಟಿಸಿ ರಕ್ತದಾನದ ಅಗತ್ಯತೆ ಮತ್ತು ಉಪಯುಕ್ತತೆ ಬಗ್ಗೆ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ ಕೆ ಭಾಗವಹಿಸಿ ರಕ್ತದಾನದ ಪ್ರಯೋಜನಗಳನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಟ್ರಸ್ಟಿ, ಶ್ರೀ ಶಾರದಾ ಕಾಲೇಜು ಬಸ್ರೂರು ಇವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಚಂದ್ರಾವತಿ ಶೆಟ್ಟಿ, ಆಡಳಿತ ಅಧಿಕಾರಿ ಡಾ. ಮೋಹನ್ ಕೆ ಎನ್ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕ ಮುರುಳಿದರ್ ಹೆಗ್ಡೆ ಉಪಸ್ಥಿತರಿದ್ದರು.
ರೆಡ್ ಕ್ರಾಸ್ ಘಟಕದ ಸಂಯೋಜಕ ಶ್ರೀ ಮುರುಳಿಧರ್ ಹೆಗ್ಡೆ ಸ್ವಾಗತಿಸಿ, ಉಪನ್ಯಾಸಕ ರಾಘವೇಂದ್ರ ಶೆಟ್ಟಿ ನಿರೋಪಿಸಿ, ಡಾ. ಮೋಹನ್ ಕೆ ಎನ್ ವಂದಿಸಿದರು.
ಶಿಬಿರದಲ್ಲಿ ಬಸ್ರೂರು ಸುತ್ತಮುತ್ತಲಿನ ಗ್ರಾಮದ ನೂರಕ್ಕೂ ಮಿಕ್ಕಿ ನಾಗರಿಕರು ಆರೋಗ್ಯ ತಪಾಸಣಾ ಹಾಗೂ ನೇತ್ರ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದರು.











