ಇತರೆ

ನಂಚಾರ್ ನಲ್ಲಿ ಒಮ್ಮೆಲೇ ಚಲಿಸುತ್ತಿರುವ ಬೈಕ್‌ಗೆ ಚಿರತೆ ಅಡ್ಡ ಬಂದು ಸವಾರ ಗಂಭೀರ, ಚಿರತೆ ಸಾವು

Views: 152

ಕನ್ನಡ ಕರಾವಳಿ ಸುದ್ದಿ:ಒಮ್ಮೆಲೇ ಚಲಿಸುತ್ತಿರುವ ಬೈಕ್‌ಗೆ ಚಿರತೆ ಅಡ್ಡ ಬಂದು ಚಿರತೆ ಸ್ಥಳದಲ್ಲೇ ಮೃತಪಟ್ಟು ಸವಾರ ಗಂಭೀರ ಗಾಯಗೊಂಡ ಘಟನೆ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂಚಾರ್ ನಲ್ಲಿ ಸಂಭವಿಸಿದೆ.

ಗಂಭೀರ ಗಾಯಗೊಂಡ ಬೈಕ್ ಸವಾರ ನಂಚಾರ್ ಭಾಸ್ಕರ್ ಶೆಟ್ಟಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಭಾಸ್ಕರ್ ಶೆಟ್ಟಿ ರಾತ್ರಿ ತನ್ನ ಬೈಕ್ ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಒಮ್ಮೆಲೇ ಚಿರತೆಯೊಂದು ಅಡ್ಡ ಬಂದ ಪರಿಣಾಮ ಸವಾರ ನಿಯಂತ್ರಣ ತಪ್ಪಿ ಚಿರತೆಗೆ ಡಿಕ್ಕಿ ಹೊಡೆದು ಬೈಕ್ ಪಲ್ಟಿ ಯಾಗಿದೆ. ಡಿಕ್ಕಿಯ ರಭಸಕ್ಕೆ ಚಿರತೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದು. ಬೈಕ್ ಸವಾರ ಗಂಭೀರ ಗಾಯ ಗೊಂಡಿರುತ್ತಾರೆ. ಅವರನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ.

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!