ಇತರೆ

ಮನೆಯ ಮುಂದೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಸ್ಥಳದಲ್ಲೇ ಸಾವು 

Views: 112

ಕನ್ನಡ ಕರಾವಳಿ ಸುದ್ದಿ:ಮನೆಯ ಮುಂದೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡ ಗ್ರಾಮದ ವಿನಾಯಕ ಕೇರಿಯಲ್ಲಿ ರಾತ್ರಿ ನಡೆದಿದೆ ‌

ಮೃತರನ್ನು ಸಂತೋಷ ಗೌಡ(50) ಹಾಗೂ ಪತ್ನಿ ಸೀತಾ ಗೌಡ(42) ಎಂದು ತಿಳಿದು ಬಂದಿದೆ.

ಮನೆಯ ಮುಂಭಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಆಕಸ್ಮಿಕವಾಗಿ ಸಂತೋಷ ಗೌಡರಿಗೆ ಸ್ಪರ್ಶಿಸಿದೆ.ಪತಿಗೆ ವಿದ್ಯುತ್ ಸ್ಪರ್ಶಿಸಿದನ್ನು ಕಂಡು ಪತ್ನಿಯೂ ಆತನನ್ನ ರಕ್ಷಿಸಲು ಮುಂದಾಗಿದ್ದಳು.ಇಬ್ಬರಿಗೂ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಮೃತ ದೇಹವನ್ನು ಹೊನ್ನಾವರ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಸ್ಥಳಿಯರು ಆರೋಪ ಮಾಡಿ ಹೊನ್ನಾವರ ತಾಲೂಕು ಆಸ್ಪತ್ರೆ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

 

Related Articles

Back to top button
error: Content is protected !!