ಇತರೆ
ಅಮಾಸೆಬೈಲು: ಮಾಜಿ ತಾಲೂಕು ಪಂಚಾಯತ್ ಸದಸ್ಯನಿಂದ ಯುವತಿಯ ಮಾನಭಂಗಕ್ಕೆ ಯತ್ನ.?

Views: 327
ಕನ್ನಡ ಕರಾವಳಿ ಸುದ್ದಿ: ಅಮಾಸೆಬೈಲ್ ಇಲ್ಲಿನ ರಟ್ಟಾಡಿ ಎಂಬಲ್ಲಿ ಕರೆಯೋಲೆ ಕೊಡಲು ಬಂದ ಸಂಘದ ಸದಸ್ಯೆಯನ್ನೇ ಬಲತ್ಕಾರಕ್ಕೆ ಮುಂದಾದ ಘಟನೆ ನಡೆದಿದೆ.
ಅಮಾಸೆಬೈಲ್ ಮಾಜಿ ತಾಲೂಕು ಪಂಚಾಯತ್ ಸದಸ್ಯ ಸ್ಥಳೀಯ ನಾಯಕರೊಬ್ಬರಿಗೆ ಕರೆಯೋಲೆ ನೀಡಲು ತೆರಳಿದ್ದರು. ಅದೇ ಸಂದರ್ಭ ಆತನ ಮನೆಯಲ್ಲಿ ಯಾರು ಇಲ್ಲದ ಕಾರಣ ಈಕೆಯನ್ನು ಸಲುಗೆಯಿಂದ ಮಾತನಾಡಿಸಿದ್ದಲ್ಲದ್ದಕ್ಕೆ ಈತನ ವರ್ತನೆ ನೋಡಿ ಬೆದರಿದ ಹುಡುಗಿ ಅಲ್ಲಿಂದ ಓಡಲು ತಯಾರಾದಳು. ಕೂಡಲೇ ಈತ ಆಕೆಯನ್ನು ಬಲವಂತವಾಗಿ ಎಳೆದಾಡಿದ್ದಾನೆ. ಆಕೆ ಕೂಗಿಕೊಂಡಾಗ ವಿಚಲಿತನಾಗಿ ಆಕೆಯನ್ನು ಬಿಟ್ಟು ಕಳಿಸಿದ್ದಾನೆ ಎಂದು ತಿಳಿದು ಬಂದಿದೆ. ಸುದ್ದಿ ಅಲ್ಲಲ್ಲಿ ಹಬ್ಬುತ್ತಿರುವಾಗಲೇ ಸ್ಥಳೀಯರು ಠಾಣೆಗೆ ದೂರು ನೀಡುವಂತೆ ಒತ್ತಾಯಿಸಿದ್ದಾರೆ