ಇತರೆ
ಯೂಟ್ಯೂಬರ್ ಸಮೀರ್ ಎಂಡಿ ನಿವಾಸದ ಮೇಲೆ ಬೆಳ್ತಂಗಡಿ ಪೊಲೀಸರ ದಾಳಿ

Views: 72
ಕನ್ನಡ ಕರಾವಳಿ ಸುದ್ದಿ:ಯೂಟ್ಯೂಬರ್ ಸಮೀರ್ ವಾಸವಾಗಿದ್ದ ಬನ್ನೇರುಘಟ್ಟದ ಹುಲ್ಲಹಳ್ಳಿಯ ಬಾಡಿಗೆ ಮನೆ ಮೇಲೆ ಬೆಳ್ತಂಗಡಿ ಪೊಲೀಸರು ಇಂದು ಮಧ್ಯಾಹ್ನ ದಾಳಿ ಮಾಡಿದ್ದಾರೆ.
ಯೂಟ್ಯೂಬರ್ ಎಂಡಿ ಸಮೀರ್ ಬೆಳ್ತಂಗಡಿ ಪೊಲೀಸರಿಗೆ ಸರಿಯಾಗಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು. ಇನ್ಸ್ಪೆಕ್ಟರ್ ನಾಗೇಶ್ ಖದ್ರಿ ಮತ್ತು ಅವರ ತಂಡ ಎಫ್‌ಎಸ್‌ಎಲ್ ವಿಭಾಗದ ಸೋಕೋ ಸಿಬ್ಬಂದಿ ಜತೆ ಇಂದು ಮಧ್ಯಾಹ್ನ 1.30ರ ಸುಮಾರಿನಲ್ಲಿ ನಗರಕ್ಕೆ ಆಗಮಿಸಿ ಆತನ ಮನೆಯನ್ನು ಮಹಜರು ನಡೆಸಿದೆ. ಪ್ರಕರಣದ ವಿಡಿಯೋ ಮಾಡಲು ಬಳಸಿದ ಕಂಪ್ಯೂಟರ್ ಮತ್ತು ಮೊಬೈಲ್‌ಅನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳ್ತಂಗಡಿ ಪೊಲೀಸರು ಈಗಾಗಲೇ ಆತನನ್ನು ಎರಡು ಬಾರಿ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಂಡಿದ್ದಾರೆ.