ಇತರೆ

ಚಿನ್ನಯ್ಯ ತಂದ ಬುರುಡೆ ಯಾರದ್ದು..? ಎಲ್ಲಿಂದ..?ಎಸ್ಐಟಿ ತನಿಖೆ ವೇಳೆ ಸಿಕ್ತು ಬಿಗ್ ಟ್ವಿಸ್ಟ್! 

Views: 312

ಕನ್ನಡ ಕರಾವಳಿ ಸುದ್ದಿ: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳ ಗ್ರಾಮದ ಶವ ಹೂತಿಟ್ಟ ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈ ಹಿಂದೆ ಆರೋಪಿ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ತಾನು ಹೂತಿದ್ದೆ ಎಂದು ಹೇಳಿ ಬುರುಡೆಯೊಂದನ್ನು ಹಾಜರುಪಡಿಸಿದ್ದ. ಆದರೆ, ಈಗ ಈ ಬುರುಡೆ ಎಲ್ಲಿಂದ ಬಂತು.. ಯಾರದ್ದು ಎಂಬುವುದೇ ದೊಡ್ಡ ಟ್ವಿಸ್ಟ್ ಸಿಕ್ಕಿದೆ.

ಚಿನ್ನಯ್ಯನ ಗೊಂದಲಕಾರಿ ಹೇಳಿಕೆಗಳು ಜುಲೈ 11 ರಂದು ನ್ಯಾಯಾಲಯಕ್ಕೆ ಬುರುಡೆ ಸಲ್ಲಿಸಿದ ಚಿನ್ನಯ್ಯ, ಅದು ತಾನು ಹಿಂದೆ ಹೂತಿದ್ದ ವ್ಯಕ್ತಿಯದೆ ಎಂದು ಹೇಳಿಕೊಂಡಿದ್ದ. ಆದರೆ, ಎಸ್ಐಟಿ. ತಂಡ ಆತ ತೋರಿಸಿದ 15 ಸ್ಥಳಗಳಲ್ಲಿ ಉತ್ಪನನ ನಡೆಸಿದ ನಂತರ, ಬುರುಡೆ ತೆಗೆದ ಜಾಗದ ಮಹಜರು ಮಾಡಲು ಮುಂದಾದಾಗ, ಚಿನ್ನಯ್ಯ ತನ್ನ ಹೇಳಿಕೆಗಳನ್ನು ಬದಲಿಸಿದ್ದಾನೆ.

ಆ ಬುರುಡೆಗೂ ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೂ ಸಂಬಂಧವಿಲ್ಲ. ಅದನ್ನು ಬೇರೊಂದು ಜಾಗದಿಂದ ತರಲಾಗಿದೆ ಎಂದು ಚಿನ್ನಯ್ಯ ಎಸ್ಐಟಿಗೆ ತಿಳಿಸಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಅಲ್ಲದೆ ಬುರುಡೆಯನ್ನು ಯಾವುದೋ ಲ್ಯಾಬ್ ನಿಂದ ತಂದು, ಬೇರೆ ಜಾಗದಲ್ಲಿ ಹೂತು, ನಂತರ ಅದನ್ನು ತೆಗೆದು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.ಎಂದು ಆರೋಪಿ ಹೇಳಿಕೊಂಡಿರುವುದಾಗಿ ಮಾಧ್ಯಮ ವರದಿಗಳು ಉಲ್ಲೇಖಿಸಿವೆ. ಈ ಕಾರಣದಿಂದ ಚಿನ್ನಯ್ಯನನ್ನು ಆರೋಪಿಯನ್ನಾಗಿ ಮಾಡಲಾಗಿದ್ದು, ಆತನ ವಿರುದ್ಧ ಹತ್ತಕ್ಕೂ ಹೆಚ್ಚು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ

ಈ ಬೆಳವಣಿಗೆಗಳು ಪ್ರಕರಣದ ಸುತ್ತ ಭಾರೀ ಅನುಮಾನಗಳನ್ನು ಹುಟ್ಟುಹಾಕಿದ್ದು. ಜನಸಾಮಾನ್ಯರಲ್ಲಿ ಕುತೂಹಲ ಮೂಡಿಸಿವೆ. FSL ವರದಿ ಬಂದ ನಂತರವೇ ಈ ಬುರುಡೆ ರಹಸ್ಯದ ಅಸಲಿಯತ್ತ ಬಯಲಾಗಲಿದೆ.

Related Articles

Back to top button