ಇತರೆ

ಕಾರ್ಕಳ: ಮಹಿಳೆಯ ಜತೆ ಸಲುಗೆ, ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ,ಆರೋಪಿ ಬಂಧನ 

Views: 132

ಕನ್ನಡ ಕರಾವಳಿ ಸುದ್ದಿ: ಕಾರ್ಕಳದಲ್ಲಿ ಫೈನಾನ್ಸ್ ನಡೆಸುತ್ತಿದ್ದ ಮಂಗಳೂರು ಮೂಲದ ನವೀನ್ ಪೂಜಾರಿ (45) ಎಂಬವರ ಕೊಲೆ ಪ್ರಕರಣ ಸಂಬಂಧಿಸಿ ಬಸ್‌ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ತಡರಾತ್ರಿ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಹತ್ಯೆ ನಡೆದಿತ್ತು. ಒಬ್ಬಳೇ ಮಹಿಳೆ ಜೊತೆಗಿನ ಸ್ನೇಹ ಕೃತ್ಯಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಪರೀಕ್ಷಿತ ಗೆಳತಿಯ ಜೊತೆಗೆ ನವೀನ್ ಕೂಡ ಗೆಳೆತನ ಮಾಡಿದ್ದು ಆಗಾಗ ನವೀನನಿಗೆ ಎಚ್ಚರಿಕೆ ನೀಡಿದ್ದರೂ ಅವರ ಸ್ನೇಹ ಮುಂದುವರಿದಿದೆ ಎಂದು ತಿಳಿಯಲಾಗಿದೆ

ನವೀನ್ ಮತ್ತು ಪರೀಕ್ಷಿತ್ ಇಬ್ಬರೂ ಸೋಮವಾರ ಮಧ್ಯಾಹ್ನದಿಂದ ಜೊತೆಗಿದ್ದರು. ಬಾರ್ ನಲ್ಲಿ ಮಧ್ಯ ಸೇವನೆ ಮಾಡಿದ್ದು ರಾತ್ರಿ ಕುಡಿದ ಮತ್ತಿನಲ್ಲಿ ಜಗಳ ಆರಂಭವಾಗಿತ್ತು ವಿಕೋಪಕ್ಕೆ ಹೋದ ಗಲಾಟೆಯಿಂದ ಪರೀಕ್ಷಿತ್ ಚೂರಿಯಿಂದ ಇರಿದಿದ್ದಾನೆ.

ಪರೀಕ್ಷಿತ್ ಸಂಜೀವ ಗೌಡ ಬಂಧಿತ ಆರೋಪಿ. ಈತನೂ ಮಂಗಳೂರು ಮೂಲದವನಾಗಿದ್ದು ವೃತ್ತಿಯಲ್ಲಿ ಬಸ್‌ ಚಾಲಕನಾಗಿದ್ದ. ತನ್ನ ಪತ್ನಿಯನ್ನು ತೊರೆದು ಕಾರ್ಕಳದ ದೂಪದಕಟ್ಟೆ ಎಂಬಲ್ಲಿ ಒಂಟಿಯಾಗಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಇತ್ತ ನವೀನ್ ಪೂಜಾರಿ ಕೂಡ ಪತ್ನಿ, ಮಕ್ಕಳನ್ನು ಬಿಟ್ಟು ಒಬ್ಬಂಟಿ ನೆಲೆಸಿದ್ದರು.

ಲಾರಿ ಚಾಲಕ ನವೀನ್ ಪೂಜಾರಿ ಕೆಲವು ವರ್ಷಗಳಿಂದ ಕಾರ್ಕಳದ ರಥಬೀದಿ ಸಮೀಪದ ವಸತಿ ಸಮುಚ್ಚಯದಲ್ಲಿ ನೆಲೆಸಿದ್ದ, ಕುಂಟಲಪಾಡಿ ರಸ್ತೆಯ ಅಂಭಾ ಭವಾನಿ ದೇವಸ್ಥಾನದ ಕಡೆಗೆ ಹೋಗುವ ಜಂಕ್ಷನ್ ಸಮೀಪ ಮುಂಜಾನೆ 3 ಗಂಟೆಗೆ ಸುಮಾರಿಗೆ ಯಾರೋ ಬಿದ್ದಿರುವುದಾಗಿ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಸಂಜೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.

ವ್ಯಕ್ತಿಯ ಮೊಬೈಲ್ ಸಂಪರ್ಕ ಸಹಿತ, ಹಣಕಾಸು ವ್ಯವಹಾರ ಇನ್ನಿತರ ಮಾಹಿತಿ, ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ, ವಿಧಿವಿಜ್ಞಾನ ತಜ್ಞರ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.

Related Articles

Back to top button