ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್! ಖಾಸಗಿ ಬಸ್ ದರ ಭಾರಿ ಏರಿಕೆ

Views: 92
ಕನ್ನಡ ಕರಾವಳಿ ಸುದ್ದಿ: ಗಣೇಶ ಹಬ್ಬವನ್ನು ಅದ್ಧೂರಿಯಾಗಿ ನೆರವೇರಿಸುತ್ತಾರೆ. ಸಿಲಿಕಾನ್ ಸಿಟಿಯ ಬೀದಿ ಬೀದಿಯಲ್ಲೂ ವಿನಾಯಕನನ್ನು ಕಾಣಬಹುದು. ಇದರ ಜೊತೆಗೆ ಎಷ್ಟೋ ಜನರು ಗಣೇಶೋತ್ಸವಕ್ಕೆ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ. ಅಂಥವರಿಗೆ ಖಾಸಗಿ ಬಸ್ ಮಾಲಕರಿಂದ ಬಿಗ್ ಶಾಕ್ ನೀಡಿದೆ.
ಆಗಸ್ಟ್ 27 ರಂದು ಗಣೇಶ ಹಬ್ಬಕ್ಕೂ ಒಂದು ದಿನ ಮೊದಲೇ ಅಂದರೆ ಆಗಸ್ಟ್ 26ಕ್ಕೆ ಗೌರಿ ಹಬ್ಬದ ದಿನವೇ ಬಸ್ ಪ್ರಯಾಣ ಏರಿಕೆ ಮಾಡಲಾಗಿದೆ.
ಗಣೇಶನ ಹಬ್ಬಕ್ಕೆ ಜನ ಸಾಮಾನ್ಯರಿಗೆ ದರ ಏರಿಕೆಯ ಬರೆ ಎಳೆಯಲಾಗುತ್ತಿದೆ. ಕೆಲ ಖಾಸಗಿ ಬಸ್ ಮಾಲೀಕರಿಂದ ಜನ ಸಾಮಾನ್ಯರ ಸುಲಿಗೆ ನಡೆಯುತ್ತಿದೆ ಎನ್ನಬಹುದು. ಬಸ್ ಪ್ರಯಾಣ ದರ, ಒನ್ ಟು ತ್ರಿಬಲ್ ಟಿಕೇಟ್ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಪ್ರಯಾಣಿಕರು ದುಬಾರಿ ಹಣ ಕೊಟ್ಟು ತಮ್ಮ ಊರಿಗೆ ಹೋಗಬೇಕಿದ್ದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಬಸ್ ದರಗಳು
ಬೆಂಗಳೂರು ಇಂದ ಮಡಿಕೇರಿ
ಇಂದಿನ ದರ ₹500- ₹600
ಅ.26ರ ದರ ₹1500- ₹5000
ಬೆಂಗಳೂರು ಇಂದ ಉಡುಪಿ
ಇಂದಿನ ದರ ₹600- 950
ಅ.26ರ ದರ ₹2500- ₹3000
ಬೆಂಗಳೂರು ಇಂದ ಧಾರವಾಡ
ಇಂದಿನ ದರ ₹800- ₹1200
ಅ.26ರ ದರ ₹1700- ₹4000
ಬೆಂಗಳೂರು ಇಂದ ಬೆಳಗಾವಿ
ಇಂದಿನ ದರ ₹800- ₹1000
ಅ. 26ರ ದರ ₹2000- ₹3000
ಬೆಂಗಳೂರು ಇಂದ ದಾವಣಗೆರೆ
ಇಂದಿನ ದರ ₹600- ₹800
ಅ. 26ರ ದರ ₹1300-₹2000