ಕುಂದಾಪುರ:ಅಸೋಡಿನಲ್ಲಿ ರೈಲಿಗೆ ಸಿಲುಕಿ 2 ಹಸುಗಳು ಸಾವು, 3 ಹಸುಗಳು ಗಂಭೀರ.. ಮಾನವೀಯತೆ ಮೆರೆದ ಗೋಪ್ರಿಯರು!

Views: 536
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಅಸೋಡಿನಲ್ಲಿ ಶುಕ್ರವಾರ ಸಂಜೆ 5 ಹಸುಗಳು ರೈಲ್ವೆ ಅಪಘಾತಕ್ಕೀಡಾಗಿದ್ದವು ಅದರ ಪೈಕಿ 2 ಹಸುಗಳು ಸ್ಥಳದಲ್ಲೇ ಮೃತಪಟ್ಟವು ಇನ್ನು ಉಳಿದ ಹಸುಗಳು ಗಂಭೀರವಾಗಿ ಗಾಯಗೊಂಡಿದ್ದು ಅವುಗಳನ್ನು ಹತ್ತಿರದ ಗೋಶಾಲೆಗೆ ಸಾಗಿಸಲಾಯಿತು
ಗೋವುಗಳ ಅಂತ್ಯಕ್ರಿಯೆ ಮತ್ತು ಸೇವೆಯಲ್ಲಿ ತೊಡಗಿಸಿಕೊಂಡ ಅಸೋಡಿನ ಗೋಶಾಲೆ ಪ್ರಮುಖರಾದ ನಾಗರಾಜ್ ಹೆಬ್ಬಾರ್, ಕಾಳಾವರ ನಂದಿಕೇಶ್ವರ ಬೇಕರಿ ಮಾಲೀಕ ಶಶಿ, ರೈಲ್ವೆ ಸಿಬ್ಬಂದಿ ವಿಜಯ್, ಗೋ ಪ್ರಿಯರು ಊರಿನ ಎಲ್ಲಾ ಯುವಕರು ಸ್ಪಂದಿಸಿದ್ದಾರೆ.
ರೈಲ್ವೆ ರಸ್ತೆ ಕಿರಿದಾಗಿದ್ದರಿಂದ ಎರಡೂ ಕಡೆಗಳಲ್ಲೂ ಮುಳ್ಳುಗಳು ಬೆಳೆದಿದ್ದರಿಂದ 600 ಮೀಟರ್ ಅಷ್ಟು ದೂರ ಎತ್ತಿ ಕೊಂಡು ಸಾಗಿ ಗೋಶಾಲೆಗೆ ತಲುಪಿಸಲಾಯಿತು ಹಾಗೂ ಉಳಿದೆರಡು ಮೃತಪಟ್ಟುವುಗಳನ್ನು 500 ಮೀಟರ್ ದೂರದಲ್ಲಿ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದರು.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಾಣಿ ಬಲಿ ತಡೆಗೆ ಬೇಕಿದೆ ಬೇಲಿ
ಶ್ರೀ ವಾದಿರಾಜರ ಜನ್ಮಕ್ಷೇತ್ರ ಹೂವಿನಕೆರೆ ಸಮೀಪಲ್ಲಿಯೇ ಹಾದು ಹೋಗುವ ರೈಲ್ವೆ ಹಳಿಯಿಂದ ಹಾದುಹೋಗುವ ದಾರಿಯಲ್ಲಿ ಹಸಿ ಹುಲ್ಲನ್ನು ಹುಡುಕಿ ಬರುವ ಜಾನುವಾರುಗಳು ರೈಲಿಗೆ ಸಿಲುಕಿ ಸಾವನ್ನಪ್ಪುತ್ತಿರುವ ಘಟನೆ ಅಸೋಡು ಮತ್ತು ಹೂವಿನಕೆರೆಯಲ್ಲಿ ನಿರಂತರ ನಡೆಯುತ್ತಿದೆ.
ಯಾವುದೇ ತಡೆ ಬೇಲಿ ಇಲ್ಲದಿರುವ ಈ ಹಳಿಯ ಇಕ್ಕೆಲದ ದಾರಿಯಲ್ಲಿ ದನ, ಕರುಗಳು ಒಂದೇ ಸವನೆ ಭಾರಿ ಶಬ್ದದಿಂದ ರೈಲು ಹತ್ತಿರಕ್ಕೆ ಬಂದಾಗ ಆ ಮೂಕ ಪ್ರಾಣಿಗಳು ದಿಕ್ಕು ತೋಚದೆ ಅಡ್ಡಾದಿಡ್ಡಿ ಓಡಾಡಿ ರೈಲಿಗೆ ಸಿಕ್ಕಿ ಸಾವನಪ್ಪುತ್ತಿವೆ. ಜನರು ಮಾತ್ರ ರೈಲ್ವೆ ಇಲಾಖೆಯವರು ವಿಧಿಸುತ್ತಿರುವ ದಂಡಕ್ಕೆ ಹೆದರಿ ಆ ಪ್ರಾಣಿಗಳು ನಮ್ಮದಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಸುರಕ್ಷಾ ದೃಷ್ಟಿಯಿಂದ ಪರಿ ಪರಿಯಾಗಿ ಮನವಿ ಮಾಡಿಕೊಂಡರೂ ಇಲ್ಲಿಯವರೆಗೆ ಯಾವುದೇ ಪರಿಹಾರ ಸಿಗಲಿಲ್ಲ.
ಇನ್ನಾದರೂ ಸ್ಥಳೀಯ ಕಾಳಾವರ, ಕೆದೂರು ಪಂಚಾಯಿತಿ ಹಾಗೂ ರೈಲ್ವೆ ಇಲಾಖೆಯವರು ಮಾನವೀಯ ದೃಷ್ಟಿಯಿಂದ ಹೆಚ್ಚಿನ ನಿಗಾ ವಹಿಸಿ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಾಣಿಗಳ ಬಲಿಯನ್ನು ತಡೆಯಲು ತಂತಿ ಬೇಲಿಯನ್ನು ನಿರ್ಮಿಸಬೇಕಾಗಿದೆ. ಕೇವಲ ಕೃಷಿ ಕಾರ್ಯಗಳಿಗೆ ಅನುಕೂಲವಾಗುವಂತೆ ಹೊರೆಯಾಳುಗಳಿಗೆ ಮಾತ್ರ ದಾರಿ ಬಿಟ್ಟು ಉಳಿದ ಕಡೆ ಬೇಲಿ ಹಾಕಿದರೆ ಪ್ರಾಣಿಬಲಿ ತಪ್ಪಿಸಬಹುದು.