ಜನಮನ

ಕೊಲ್ಲೂರು ಮೂಕಾಂಬಿಕೆ ಭಕ್ತರಿಗೆ ಗುಡ್‌ನ್ಯೂಸ್: ಬೈಂದೂರಿನಲ್ಲಿ ರೈಲು ನಿಲುಗಡೆಗೆ ಆದೇಶ

Views: 168

ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ರೈಲ್ವೆ ಖಾತೆ ಸಚಿವರು ಗುಡ್ ನ್ಯೂಸ್ ನೀಡಿದ್ದಾರೆ.

ಕೊಲ್ಲೂರಿಗೆ ಪ್ರಯಾಣಿಸುವ ಕರ್ನಾಟಕದ ಭಕ್ತರಿಗೆ ಹಾಗೂ ನೆರೆಯ ರಾಜ್ಯದ ಭಕ್ತರಿಗೆ ಅನುಕೂಲವಾಗಲಿದೆ. ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ಮೂಕಾಂಬಿಕಾ ರೋಡ್ ಬೈಂದೂರಿನಲ್ಲಿ ನೂತನ ನಿಲುಗಡೆ ನೀಡಲಿದೆ ಎಂದು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ.

ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿ ದರ್ಶನಕ್ಕಾಗಿ ಪ್ರಯಾಣಿಸುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ಹಿತದೃಷ್ಠಿಯಿಂದ ಗೋವಾದ ಮಡಗಾಂವ್‌ನಿಂದ ಕೇರಳದ ಎರ್ನಾಕುಲಂವರೆಗೆ ಚಲಿಸುವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ 10215/10216) ಇನ್ನು ಮುಂದೆ ಮೂಕಾಂಬಿಕಾ ರೋಡ್ ಬೈಂದೂರಿನಲ್ಲಿ ನೂತನ ನಿಲುಗಡೆ ನೀಡಲಿದೆ.

ತತಕ್ಷಣದಿಂದಲೇ ಅನ್ವಯವಾಗುವಂತೆ ಆದೇಶಿಸಲಾಗಿದೆ. ಈ ಭಾಗದ ಪ್ರಯಾಣಿಕರು ಈ ರೈಲು ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಕೋರಿದ್ದಾರೆ.

ಮಡಗಾಂವ್, ಗೋವಾ – ಎರ್ನಾಕುಲಂ, ಕೇರಳ ರೈಲು ನಿಲ್ದಾಣವರೆಗೆ ಸೇವೆ ನೀಡುತ್ತದೆ. ಗೋವಾದ ಮಡಗಾಂವ್ (MAO) ನಿಂದ ಕೇರಳದ ಎರ್ನಾಕುಲಂ ಜಂಕ್ಷನ್ (ERS) ವರೆಗಿನ ಈ ಎರಡು ನಿಲ್ದಾಣಗಳ ಮಧ್ಯ ಒಟ್ಟು 850 ಕಿ.ಮೀ ದೂರ ಇದೆ. ಸುಮಾರು 13 ಗಂಟೆ 20 ನಿಮಿಷ ತೆಗೆದುಕೊಳ್ಳುತ್ತದೆ. ಈ ಪ್ರಯಾಣವು ಸುರಂಗಗಳು ಮತ್ತು ಸೇತುವೆಗಳಿಗೆ ಹೆಸರಾದ ಸುಂದರವಾದ ಕೊಂಕಣ ರೈಲ್ವೆ ಮಾರ್ಗದಲ್ಲಿ ಹಾದು ಹೋಗುತ್ತದೆ.

ಮಡಗಾಂವ್ ನಿಂದ ಹೊರಟು ಕಾರವಾರ ಮೂಲಕ ಕರ್ನಾಟಕದ ಕರಾವಳಿಯ ಪ್ರಮುಖ ಪ್ರದೇಶಗಳಾದ ಭಟ್ಕಳ, ಉಡುಪಿ, ಮಂಗಳೂರು ಜಂಕ್ಷನ್ ಹಾದು ಕಾಸರಗೋಡು, ಕಣ್ಣೂರು, ಕೋಝಿಕೋಡ್, ತಿರುರು, ಶೋರನೂರ್ ಜಂಕ್ಷನ್, ತ್ರಿಶೂರ್ , ಆಲುವಾ, ಎರ್ನಾಕುಲಂ ಜಂಕ್ಷನ್ ತಲುಪುತ್ತದೆ. ಈ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತಿದೆ. ಇದೀಗ ಹೆಚ್ಚುವರಿಯಾಗಿ ಮೂಕಾಂಬಿಕಾ ರೋಡ್ ಬೈಂದೂರಿನಲ್ಲಿ ನಿಲುಗಡೆ ನೀಡಲಿದೆ.

 

 

Related Articles

Back to top button