ಇತರೆ

ಕುಂದಾಪುರ: ಕೆದೂರಿನಲ್ಲಿ ಇಸ್ಪೀಟ್ ಜೂಜಾಟ ಅಡ್ಡೆಯ ಮೇಲೆ ಪೊಲೀಸ್ ದಾಳಿ, ಮೂವರು ವಶಕ್ಕೆ

Views: 119

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕು ಕೆದೂರು ಗ್ರಾಮದ ಕಲ್ಲು ಕೊರೆ ಶೆಡ್‌ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೋಟ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್. ಅವರು ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದರು.

ಆರೋಪಿಗಳು ಸ್ಥಳೀಯರಾದ ಕೆದೂರು ಗ್ರಾಮದ ಕೃಷ್ಣ (40), ದಿನೇಶ ಪೂಜಾರಿ (35), ಮಣೂರು ಪಡುಕರೆಯ ಹರೀಶ (28) ಅವರನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಬಳಿ ಇದ್ದ ನಗದು 7,600 ರೂ ಮತ್ತು ಇಸ್ಪೀಟ್ ಜುಗಾರಿಗೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Related Articles

Back to top button