ಶಿಕ್ಷಣ

ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಬಾಲರಾಧೆ ಮತ್ತು ಬಾಲಗೋಪಾಲ ಸ್ಪರ್ಧೆ

Views: 109

ಕನ್ನಡ ಕರಾವಳಿ ಸುದ್ದಿ : ಶಿರೂರು ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪ್ರೀ ಕೆ ಜಿ ಯಿಂದ ಮೂರನೇ ತರಗತಿ ವಿದ್ಯಾರ್ಥಿಗಳಿಗೆ ಬಾಲರಾಧೆ ಮತ್ತು ಬಾಲಗೋಪಾಲ ಸ್ಪರ್ಧೆಯನ್ನು ಆಯೋಜಿಸಲಾಯಿತು.

ಸ್ಪರ್ಧೆಯಲ್ಲಿ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೃಷ್ಣ ರಾಧೆಯರ ವಿವಿಧ ವೇಷ ಭೂಷಣಗಳೊಂದಿಗೆ ಉಲ್ಲಾಸದಿಂದ ಪಾಲ್ಗೊಂಡರು.

ಬೆಣ್ಣೆ ಮಡಕೆಯೊಂದಿಗೆ ಶ್ರೀಕೃಷ್ಣನ ಬಾಲ್ಯಲೀಲೆಗಳನ್ನು ವರ್ಣಿಸುವ ದೃಶ್ಯಾವಳಿಗಳು ನೋಡುಗರ ಮನ ಸೂರೆಗೊಳಿಸಿತು.ಸ್ಪರ್ಧೆಯ ನಿರ್ಣಾಯಕರಾಗಿ ಸಂಸ್ಥೆಯ ಶಿಕ್ಷಕಿಯರಾದ ಕುಮಾರಿ ಅಕ್ಷತಾ, ಕುಮಾರಿ ನವ್ಯಾ ಹಾಗೂ ಕುಮಾರಿ ಮೈನಾ ಸಹಕರಿಸಿದರು.

ವಿಜೇತರ ಯಾದಿ: ಪ್ರೀ ಕೆ ಜಿ ಯಿಂದ ಯು ಕೆ ಜಿ ವಿಭಾಗ

ಬಾಲರಾಧೆ

1.ವಿಷ್ಣುಪ್ರಿಯಾ 2.ಯತೀಕಾ 3.ನಿಧಿಮಾ ಮತ್ತು ಧೃತಿ

ಬಾಲಗೋಪಾಲ

1.ಮನನ ಬಿಲ್ಲವ 2.ಆರ್ಯ 3.ಪೃಥ್ವಿರಾಜ್

ಒಂದರಿಂದ ಮೂರನೇ ತರಗತಿ ವಿಭಾಗ

ಬಾಲರಾಧೆ

1.ಮಿಥಾಲಿ 2.ಆಧ್ಯಾ 3.ಅದ್ವಿತಾ

ಬಾಲಗೋಪಾಲ

1.ಭುವಿತ್ 2.ಮೋಹಿತ್ 3.ಅಕ್ಷಯ್

ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಕುಮಾರಿ ತೇಜಸ್ವಿನಿ ನಾಯ್ಕ್ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು ,ಸಹಶಿಕ್ಷಕರು, ಪಾಲಕರು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Related Articles

Back to top button