ಇತರೆ
ಕುಂದಾಪುರ: ಕೋಟೇಶ್ವರದಲ್ಲಿ ಕೆರೆಗೆ ಬಿದ್ದು ಸಾವು

Views: 167
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕೋಟೇಶ್ವರದ ಸಣ್ಣಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಹೊಂಬಾಡಿಯ ಗಣೇಶ್ (43) ಮೃತಪಟ್ಟವರು ಎಂದು ತಿಳಿಯಲಾಗಿದೆ.
ಕೋಟೇಶ್ವರ ಸಣ್ಣ ಕೆರೆಯಲ್ಲಿ ಶವ ತೇಲಾಡುತ್ತಿರುವ ಕುರಿತು ಕೋಟೇಶ್ವರ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ ಅವರಿಗೆ ಮಾಹಿತಿಯ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಮೊಬೈಲ್, ಪರ್ಸ್ ಲಭಿಸಿದ್ದ ಆಧಾರ್ ಮೇಲೆ ಮೃತ ವ್ಯಕ್ತಿ ಹೊಂಬಾಡಿಯ ಗಣೇಶ್ ಎಂದು ತಿಳಿದುಬಂದಿದೆ.
ಕಾಲು ಜಾರಿ ಬಿದ್ದು ಮೃತಪಟ್ಟಿರುವ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.