ಯುವಜನ

ಪ್ರೇಮಿಗಳಿಬ್ಬರು ಮಂತ್ರ ಮಾಂಗಲ್ಯ ಪದ್ಧತಿಯಂತೆ ಸರಳ ವಿವಾಹ 

Views: 161

ಕನ್ನಡ ಕರಾವಳಿ ಸುದ್ದಿ: ಕಾಲೇಜು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಕುಟುಂಬದವರು, ಗಣ್ಯರ ಸಮ್ಮುಖದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಪ್ರತಿಜ್ಞಾವಿಧಿ ಸ್ವೀಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಗೋಕುಲಂ ಕಾಂಟೂರ್ ರಸ್ತೆಯ ಶ್ಯಾಗಲೆ ಶಿವರುದ್ರಪ್ಪ ಟ್ರಸ್ಟ್ನಲ್ಲಿರುವ ಜಾತ್ಯತೀತ ಒಲವಿನ ವಿವಾಹ ವೇದಿಕೆ ಮಾನವ ಮಂಟಪದಲ್ಲಿ ಭಾನುವಾರ ನಡೆದ ಸರಳ ಪ್ರೇಮ ವಿವಾಹದಲ್ಲಿ ಎಸ್.ಪ್ರಿಯಾಂಕ ಹಾಗೂ ಪ್ರಕೃತ್ ಗೌಡ ಪರಸ್ಪರ ಹಾರ ಬದಲಿಸಿಕೊಂಡು ನವಜೀವನಕ್ಕೆ ಕಾಲಿಟ್ಟರು.

ಯಾವುದೇ ಮಂತ್ರ, ಮಂಗಳವಾದ್ಯ ಇಲ್ಲದೆ ಕುವೆಂಪು ಆಶಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಗರದ ಲಕ್ಷ್ಮೀಕಾಂತ್ ನಗರದ ನಿಸರ್ಗ ಬಡಾವಣೆಯ ಟಿ.ಹೆಚ್.ಶ್ರೀನಿವಾಸಮೂರ್ತಿ-ದೇವಿ ಶಾರದ ದಂಪತಿ ಪುತ್ರಿ ಎಸ್.ಪ್ರಿಯಾಂಕ ಮತ್ತು ಮಹಾಲಕ್ಷ್ಮೀ ಬಡಾವಣೆಯ ಕೃಷ್ಣಪ್ಪ ಹಾಗೂ ಎಚ್.ಸಿ.ಶೀಲಾ ದಂಪತಿ ಪುತ್ರ ಪ್ರಕೃತ್ ಗೌಡ ಸರಳ ಪ್ರೇಮ ವಿವಾಹವಾದರು.

ಎಲಿಯೂರು ಧನಂಜಯ ಮಾತನಾಡಿ, ಕುವೆಂಪು ಅವರ ಆಶಯದಂತೆ ಮಾನವ ಮಂಟಪದಲ್ಲಿ ಮದುವೆ ಮಾಡುವುದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಕುವೆಂಪು ಅವರು ತಮ್ಮ ಮಗ ಪೂರ್ಣಚಂದ್ರ ತೇಜಸ್ವಿ ಅವರಿಗೆ ಸರಳವಾಗಿ ಮದುವೆ ಮಾಡಿ ಸಮಾಜಕ್ಕೆ ನೀಡಿದ ಸಂದೇಶದ ಮಾದರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಪೋಷಕರ ವಿರೋಧದ ನಡುವೆ ವಿವಾಹವಾಗುವವರು ಹಾಗೂ ಪೋಷಕರ ಸಮ್ಮುಖದಲ್ಲಿ ವಿವಾಹವಾಗಲು ಬಯಸುವವರಿಗೆ ವೇದಿಕೆ ಕಲ್ಪಿಸಿಕೊಡಲಾಗುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆಯಾಗುವ ಬದಲಿಗೆ ಸರಳತೆ ಪ್ರದರ್ಶಿಸಬೇಕು ಎಂದರು.

ಕುವೆಂಪು ಅವರ ಮಂತ್ರಮಾಂಗಲ್ಯದ ಆಶಯಗಳನ್ನು ಬೋಧಿಸುತ್ತಿದ್ದಂತೆ ಎಸ್.ಪ್ರಿಯಾಂಕ ಹಾಗೂ ಯು.ಕೆ.ಪ್ರಕೃತ್ ಗೌಡ ಪರಸ್ಪರ ಹಾರ ಬದಲಾಯಿಸಿಕೊಂಡರು. ನಂತರ, ವಧುವಿಗೆ ತಾಳಿ ಕಟ್ಟಿದಾಗ ನೆರೆದಿದ್ದವರು ಆಶೀರ್ವಾದ ಮಾಡಿದರು.

Related Articles

Back to top button
error: Content is protected !!