ಶಿಕ್ಷಣ
ಬಿದ್ಕಲ್ ಕಟ್ಟೆ ಶಾಲಾ ಮುಖದ್ವಾರದ ಮೇಲೆ ಮರ ಬಿದ್ದು ನಾಮಫಲಕಕ್ಕೆ ಹಾನಿ

Views: 695
ಕನ್ನಡ ಕರಾವಳಿ ಸುದ್ದಿ: ಶನಿವಾರ ಸಂಜೆ ವೇಳೆ ಬೀಸಿದ ಭಾರೀ ಗಾಳಿ ಮಳೆಗೆ ಬಿದ್ಕಲ್ ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದರ ಪ್ರಾಥಮಿಕ ವಿಭಾಗದ ಮುಖದ್ವಾರದ ಮೇಲೆ ಮರವೊಂದು ಮುರಿದು ಬಿದ್ದು ಶಾಲಾ ನಾಮಫಲಕ ಸಂಪೂರ್ಣ ಜಖಂ ಗೊಂಡಿರುತ್ತದೆ. ಶಾಲಾ ರಂಗ ಮಂಟಪದ ಬಲಭಾಗದ ಕಟ್ಟಡಕ್ಕೆ ಹೊಂದಿಕೊಂಡಿದ್ದ ರ‍್ಯಾಂಪ್ ಕೂಡಾ ಜಖಂ ಗೊಂಡಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.