ಕೃಷಿ

ಪರಿಸ್ಥಿತಿ ಆಧರಿಸಿ ಮುಂದಿನ ತಿಂಗಳು ಬರಗಾಲ ಘೋಷಣೆ: ಸರಕಾರ ಗಂಭೀರ ಚಿಂತನೆ

Views: 2

ರಾಜ್ಯದ 50 ತಾಲೂಕುಗಳಲ್ಲಿ ಮಳೆ ಕೊರತೆ ಇರುವುದರಿಂದ ಮಳೆಗಾಲದ ಅವಧಿ ಇನ್ನೂ ಇರುವುದರಿಂದ ಮಳೆ ನಿರೀಕ್ಷೆ ಮುಂದುವರಿದಿದೆ. ಮಳೆಗಾಲದ ಅವಧಿ ಬಳಿಕ ಬರಪೀಡಿತ ತಾಲೂಕುಗಳನ್ನು ಘೋಷಿಸಲು ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನಿರೀಕ್ಷೆಯಂತೆ ಮಳೆ ಬರದೇ ಹೋದರೆ ತುರ್ತು ಕ್ರಿಯಾ ಯೋಜನೆ ತಯಾರಿಸಬೇಕು. ಲಭ್ಯವಿರುವ ಯಾವುದೇ ನಿಧಿಯನ್ನು ಬಳಸಿ ಬರ ಪರಿಹಾರ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

ಕೃಷಿಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜ ವಿತರಣೆಗೆ ಸೂಕ್ತ ಪ್ರಮಾಣದಲ್ಲಿ ದಾಸ್ತಾನು ಇದ್ದರೂ ಮಳೆ ಕಡಿಮೆಯಾಗಿದ್ದರಿಂದ ರೈತರಿಗೆ ಕಷ್ಟದ ದಿನಗಳು ಎದುರಾಗಿವೆ.

ಮೋಡ ಬಿತ್ತನೆ ಬಗ್ಗೆ ಸದ್ಯ ಚಿಂತಿಸಿಲ್ಲ, ಮಳೆ ಕೊರತೆ ಮುಂದುವರಿದರೆ ಮುಂದಿನ ನಿರ್ಧಾರಕ್ಕೆ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವರು ಹೇಳಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ವಾಡಿಕೆ ಗಿಂತ ಶೇಕಡ 72ರಷ್ಟು ಮಳೆ ಕೊರತೆಯಾಗಿದೆ. ಮಲೆನಾಡು ಪ್ರದೇಶದಲ್ಲಿ 83 ರಷ್ಟು, ಕರಾವಳಿಯಲ್ಲಿ ಶೇಕಡ 77, ದಕ್ಷಿಣ ಒಳನಾಡಿನಲ್ಲಿ ಶೇಕಡ 55, ಉತ್ತರ ಒಳನಾಡಿನಲ್ಲಿ ಶೇಕಡ 69 ರಷ್ಟು ಮಳೆ ಕಡಿಮೆಯಾಗಿದೆ.

ಮಳೆ ಕೊರತೆಯಿಂದ ಬಿತ್ತನೆ ತುಸು ಕಡಿಮೆಯಾಗಿದೆ. ಮುಂದಿನ ವಾರ ಮುಂಗಾರು ಚುರುಕು ಕೊಳ್ಳುವ ನಿರೀಕ್ಷೆ ಇದ್ದು, ಇದರೊಂದಿಗೆ ಕೃಷಿ ಚಟುವಟಿಕೆಗಳ ಗರಿಗೆದರಲಿವೆ.

ಆಹಾರ ಉತ್ಪಾದನೆ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂದು ಈಗಲೇ ಹೇಳುವುದು ಕಷ್ಟ. ಇನ್ನೂ ಸಾಕಷ್ಟು ಸಮಯ ಇದೆ ಎಂದು ಕೃಷಿ ಇಲಾಖೆಯ ನಿರ್ದೇಶಕ ಜಿ.ಟಿ .ಪುತ್ರಾ ಹೇಳಿದ್ದಾರೆ.

Related Articles

Back to top button
error: Content is protected !!