ಶಿಕ್ಷಣ

ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್: ಪೋಕ್ಸೋ ಹಾಗೂ ಮಾದಕ ವ್ಯಸನದ ವಿರುದ್ಧ ಮಾಹಿತಿ ಕಾರ್ಯಕ್ರಮ

Views: 162

ಕನ್ನಡ ಕರಾವಳಿ ಸುದ್ದಿ:  ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಪೋಕ್ಸೋ ಕಾಯ್ದೆಯ ಕುರಿತಾದ ಅರಿವಿನ ಮಾಹಿತಿ ಕಾರ್ಯಗಾರ ಜೂನ್ 28ರಂದು  ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಮುಕ್ತ ಬಾಯಿ, ಪಿಎಸ್ಐ ಕರಾವಳಿ ಕಾವಲು ಪೊಲೀಸ್ ಗಂಗೊಳ್ಳಿ ಇವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯಿದೆಯ ಕುರಿತಾಗಿ ಸವಿಸ್ತಾರವಾಗಿ ವಿವರಿಸಿದರು.

ಹದಿಹರೆಯದ ವಯಸ್ಸಿನಲ್ಲಿ ಬಹಳ ಎಚ್ಚರದಿಂದ ವರ್ತಿಸುವಂತೆ ತಿಳಿಸಿ, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಒಳ್ಳೆಯದಲ್ಲ ಎಂದು ತಿಳಿ ಹೇಳಿದರು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ನೈಜ ಘಟನೆಗಳನ್ನು ಉದಾರಿಸುತ್ತಾ ಬಹಳ ಮನೋಜ್ಞವಾಗಿ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ದೀಪಿಕಾ ಆಚಾರ್ಯರವರು ವಿದ್ಯಾರ್ಥಿಗಳು ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು, ದುಶ್ಚಟಗಳಿಗೆ ದಾಸರಾಗದೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಕ್ಕಳು ತಮ್ಮ ಹಕ್ಕು ಹಾಗೂ ಕಾಯಿದೆ ಕಾನೂನಿನ ಕುರಿತಾಗಿ ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕೆಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ವೇದಿಕೆಯ ಮೇಲೆ ಸತೀಶ್ ದೇವಾಡಿಗ ಬೀಟ್ ಪೊಲೀಸರು, ರಾಘವೇಂದ್ರ ದೇವಾಡಿಗ ಗುಪ್ತ ವಾರ್ತ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕರಾದ ರಾಘವೇಂದ್ರ ಡಿ ಯವರು ಸ್ವಾಗತಿಸಿ, ಶ್ರೀ ಸುಬ್ರಮಣ್ಯ ಮರಾಟಿಯವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

Related Articles

Back to top button