ರಾಜಕೀಯ

ರಹೀಂ ಹತ್ಯೆ ಖಂಡಿಸಿ: ಮುಸ್ಲಿಂ ಕಾಂಗ್ರೆಸ್ ಮುಖಂಡರು ಸಾಮೂಹಿಕ ರಾಜೀನಾಮೆ ಮೂಲಕ ಆಕ್ರೋಶ

Views: 74

ಕನ್ನಡ ಕರಾವಳಿ ಸುದ್ದಿ:ರಹೀಂ ಹತ್ಯೆ ಖಂಡಿಸಿ ಸರ್ಕಾರದ ನಡೆ ವಿರೋಧಿಸಿ ದ.ಕ ಜಿಲ್ಲಾ ಕಾಂಗ್ರೆಸ್‌ ಮುಸ್ಲಿಂ ಮುಖಂಡರು ತಮ್ಮ ವಿವಿಧ ಘಟಕಗಳಿಗೆ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಘಟಕದ ಉಪಾಧ್ಯಕ್ಷ ಬಾತೀಶ್‌ ಅಳಕೆ ಮಜಲು, ಪಾಣೆ ಮಂಗಳೂರು ಅಲ್ಪಸಂಖ್ಯಾತ ಅಧ್ಯಕ್ಷ ಸ್ಥಾನಕ್ಕೆ ಉಬೈದುಲ್ಲಾ ಕೊಳಕೆ, ವಿಟ್ಲ ಉಪ್ಪಿನಂಗಡಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸಮದ್ ವಿಟ್ಲ, ಉಳ್ಳಾಲ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಮೀ‌ರ್, NSUI ಬೆಳ್ತಂಗಡಿ ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಮಾನ್ ಫಾರೀಶ್, ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅನ್ಸಫ್ ಕರಾಯ, ವಿಟ್ಲ ಉಪ್ಪಿನಂಗಡಿ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ಉನೇಸ್ ಗಡಿಯಾರ ಸಹಿತ ತಮ್ಮ ವಿವಿಧ ಘಟಕಗಳಿಗೆ, ವಿವಿಧ ಹುದ್ದೆಗಳಿಗೆ ಮುಸ್ಲಿಂ ಮುಖಂಡರು ರಾಜೀನಾಮೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜೀನಾಮೆ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾದ್ಯತೆ ಇದೆ.

Related Articles

Back to top button
error: Content is protected !!