ಯುವಜನ

MBBS ಮಾಡುತ್ತಿದ್ದ ಹುಡುಗಿಯ ಜೊತೆ ಪ್ರೀತಿಗಾಗಿ ಪ್ರಾಣ ಕಳೆದುಕೊಂಡ ಯುವಕ

Views: 126

ಕನ್ನಡ ಕರಾವಳಿ ಸುದ್ದಿ: ತನಗಿಂತ 2 ವರ್ಷ ದೊಡ್ಡವಳಾದ ಹುಡುಗಿಯನ್ನ ಪ್ರೀತಿ ಮಾಡಿದ್ದಕ್ಕೆ ಯುವಕನ ಕೊಲೆ ಮಾಡಿರೋ ಪ್ರಕರಣ ದೇವನಹಳ್ಳಿ ಹೊರವಲಯದ ನೀರುಗುಂಟೆಪಾಳ್ಯದಲ್ಲಿ ನಡೆದಿದೆ. ಪ್ರೀತಂ (19) ಪ್ರೀತಿಗಾಗಿ ಪ್ರಾಣ ಕಳೆದುಕೊಂಡ ಯುವಕ.

ನೀರುಗುಂಟೆಪಾಳ್ಯದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಪ್ರೀತಂ MBBS ವ್ಯಾಸಂಗ ಮಾಡುತ್ತಿದ್ದ ಹುಡುಗಿಯ ಜೊತೆ ಪ್ರೀತಿಯಲ್ಲಿದ್ದ. ಹುಡುಗಿಯನ್ನ ಪ್ರೀತಿ ಮಾಡಿದಕ್ಕೆ ಯುವತಿಯ ಸಂಬಂಧಿಕರು ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಪ್ರೀತಂ ಹಾಗೂ ವಿದ್ಯಾರ್ಥಿನಿಯ ಪ್ರೀತಿ ವಿಚಾರ ತಿಳಿದ ಯುವತಿಯ ಸಂಬಂಧಿಕರು ಎರಡು, ಮೂರು ಬಾರಿ ವಾರ್ನಿಂಗ್ ನೀಡಿದ್ದರಂತೆ. ವಾರ್ನಿಂಗ್ ಮಾಡಿದ್ರು ಪ್ರೀತಿ ಮುಂದುವರೆಸಿದ್ದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ರಾತ್ರಿ ಯುವಕನ ಕಿಡ್ನಾಪ್ ಮಾಡಿದ್ದಾರೆ.

ಯುವತಿಯ ಚಿಕ್ಕಮ್ಮನ ಮಗ ಶ್ರೀಕಾಂತ್ ಮತ್ತು ಸಹಚರರಿಂದ ಯುವಕನ ಕಿಡ್ನಾಪ್‌ ಮಾಡಿರೋ ಆರೋಪ ಇದೆ. ಯುವಕನನ್ನು ಕಿಡ್ನಾಪ್ ಮಾಡಿಕೊಂಡು ಹೋದ ನಾಲ್ಕೈದು ಜನರು ಕಂಠಪೂರ್ತಿ ಕುಡಿದು ಹಲ್ಲೆ ಮಾಡಿದ್ದಾರೆ. ಹಲ್ಲೆ ವೇಳೆ‌ ಯುವಕ‌ ಸಾವನ್ನಪ್ಪಿದ್ದಾನೆ. ಆಗ ಮೃತದೇಹವನ್ನು ಬಿಸಾಕಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.

ಪ್ರೀತಂ ತನಗಿಂತ 2 ವರ್ಷ ದೊಡ್ಡವಳಾದ ಯುವತಿಯನ್ನ ಪ್ರೀತಿ ಮಾಡಿದ್ದೇ ತಪ್ಪಾಗಿದೆ. ಬೆಳೆದು ನಿಂತಿದ್ದ ಮಗನನ್ನು ಕಳೆದುಕೊಂಡ ಪ್ರೀತಂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸ್ ಠಾಣೆ ಮುಂದೆ ತಾಯಿ ಮತ್ತು ಸಂಬಂಧಿಕರು ಈ ಸಾವಿಗೆ ನ್ಯಾಯ ಕೊಡಿಸುವಂತೆ ಗೋಳಾಡುತ್ತಿದ್ದಾರೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!