ಇತರೆ
ಇನ್ನೋವಾ ಕಾರಿನ ಟೈರ್ ಸ್ಫೋಟಗೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು: ಮೂವರು ಸಾವು

Views: 149
ಕನ್ನಡ ಕರಾವಳಿ ಸುದ್ದಿ: ಇನ್ನೋವಾ ಕಾರಿನ ಟೈರ್ ಸ್ಫೋಟವಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂರು ಜನ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಚಿತ್ರದುರ್ಗ ನಗರದ ಹೊರವಲಯದ ಸೀಬಾರ ಬಳಿಯ ಗೋಶಾಲೆ ಮುಂದಿನ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಅರ್ಜುನ್ (28), ಸರವಣ (30), ಶ್ರೀಧರ್ (30) ಎಂದು ಗುರುತಿಸಲಾಗಿದೆ. ಮೃತ ಅರ್ಜುನ್ ಚೆನೈನ ಅಶೋಕನಗರ ಪೋಲಿಸ್ ಠಾಣೆಯ ಪೇದೆ ಎನ್ನಲಾಗಿದೆ. ಇವರೆಲ್ಲರೂ ತಮಿಳುನಾಡಿನ ಕೃಷ್ಣಗಿರಿಯವರು ಎಂದು ತಿಳಿದುಬಂದಿದೆ. ಪ್ರವಾಸಕ್ಕೆಂದು ಗೋವಾಗೆ ತೆರಳುವಾಗ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಇತರೆ 6 ಜನರಿಗೆ ತೀವ್ರ ಗಾಯಗಳಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.






