ಯುವಜನ

ಹೆಂಡತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್‌: ನೆಟ್ಟಿಗರು ಆಕ್ರೋಶ!

Views: 113

ಕನ್ನಡ ಕರಾವಳಿ ಸುದ್ದಿ: ಕನ್ನಡದ ಯೂಟ್ಯೂಬರ್‌ ಒಬ್ಬರ ಆಕ್ಷೇಪಾರ್ಹ ವಿಡಿಯೊ ವೈರಲ್‌ ಆಗಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ. ಜೂಜಾಟದಲ್ಲಿ ಹೆಂಡತಿಯನ್ನೇ ಅಡವಿಟ್ಟು ರೀಲ್ಸ್ ಮಾಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ಈ ವಿಡಿಯೊದಲ್ಲಿ ಯೂಟ್ಯೂಬರ್ ದಿವಾಕರ್  ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಇಬ್ಬರೂ ಹೆಂಡತಿಯನ್ನು ಅಡ ಇಟ್ಟು ಜೂಜಾಡುವುದನ್ನು ನೋಡಬಹುದಾಗಿದೆ. ಈ ರೀಲ್ಸ್‌ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದು, ಇಂತಹ ವಿಡಿಯೋಗಳನ್ನು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇದು ಕೇವಲ ರೀಲ್ಸ್‌ಗಾಗಿ ಮಾಡಿದ ತಮಾಷೆಯಲ್ಲ, ಇದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ” ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಇಂತಹ ವಿಷಯಗಳ ಬಗ್ಗೆ ವಿಡಿಯೊ ಮಾಡುವ ಯೂಡ್ಯೂಬರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

 

Related Articles

Back to top button
error: Content is protected !!