ಇತರೆ
ಪೊಲೀಸ್ ಹೆಡ್‌ಕಾನ್ಸ್ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ

Views: 100
ಕನ್ನಡ ಕರಾವಳಿ ಸುದ್ದಿ: ಶಿಥಿಲಗೊಂಡಿರುವ ಕಟ್ಟಡದಲ್ಲಿ ಪೊಲೀಸ್ ಹೆಡ್‌ಕಾನ್ಸ್ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಡುಗೋಡಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಹೆಡ್‌ಕಾನ್ಸ್ಟೇಬಲ್ ನನ್ನು ಮುಬಾರಕ್ ಸಿಕಿಂಧರ್ ಮುಜಾವರ್ ಎಂದು ಗುರುತಿಸಲಾಗಿದೆ.
ಇವರು ಕಳೆದ 15 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹ ವಾಸನೆ ಬಂದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಮುಬಾರಕ್ ಸಿಕಿಂದರ್ ಕಳೆದ ಏಳು ವರ್ಷಗಳಿಂದ ಸಿಎಆರ್ ದಕ್ಷಿಣದಲ್ಲಿ ಕೆಲಸ ಮಾಡಿಕೊಂಡಿದ್ದರು. ಮೂರು ವರ್ಷಗಳ ಹಿಂದೆ ಮದುವೆ ಕೂಡ ಮಾಡಿಕೊಂಡಿದ್ದರು.
ಫೆಬ್ರವರಿ 9ರಂದು ಆಡುಗೊಡಿ ಪೊಲೀಸ್ ಠಾಣೆಯಲ್ಲಿ ಮುಬಾರಕ್ ಮಿಸ್ಸಿಂಗ್ ಆಗಿದ್ದರು. ಸಹಸಿಬ್ಬಂದಿಯಿಂದ ಮಿಸ್ಸಿಂಗ್ ಕಂಪ್ಲೆಂಟ್ ದಾಖಲು ಮಾಡಲಾಗಿತ್ತು. ಸದ್ಯ ಘಟನಾ ಸ್ಥಳಕ್ಕೆ ಆಡುಗೊಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.