ಇತರೆ
ವಾರಾಹಿ ಹಿನ್ನೀರಿಗೆ ಹಾರಿ ಆತ್ಮಹತ್ಯೆಮಾಡಿಕೊಂಡ ಯುವಕ

Views: 95
ಕನ್ನಡ ಕರಾವಳಿ ಸುದ್ದಿ: ಯುವಕನೋರ್ವ ವರಾಹಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೀರ್ಥಹಳ್ಳಿಯ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಮರ ಬಳಿ ನಡೆದಿದೆ.
ಸಾವನ್ನಪ್ಪಿದ ಯುವಕ ಕೈಮರ ಸಮೀಪದ ಹಾಗಲಮನೆ ನಿವಾಸಿಯ ಕೌಶಿಕ್(30) ಎಂದು ತಿಳಿದು ಬಂದಿದೆ.
ಘಟನೆಗೆ ಸಾಲಭಾದೆ ಕಾರಣ ಎನ್ನಲಾಗುತ್ತಿದ್ದು, ಇಲ್ಲಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಾಗಲಮನೆ ವಾಸಿ ಕೌಶಿಕ್ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದು, ಕೃಷಿ ಕೆಲಸ ಮಾಡಿಕೊಂಢಿದ್ದ. ಕೃಷಿ ಚಟುವಟಿಕೆಗಾಗಿ ವಿವಿದೆಡೆ ಸಾಲ ಮಾಡಿದ್ದ ಕೌಶಿಕ್‌ಗೆ ಅದನ್ನು ತೀರಿಸುವ ದಾರಿ ಕಾಣದೆ, ತನ್ನ ಜೀವನ ಅಂತ್ಯಗೊಳಿಸಿದ್ದಾನೆ ಎನ್ನಲಾಗುತ್ತಿದೆ. ಮೇಲಾಗಿ ಅಡಿಕೆಗೆ ಕಾಣಿಸಿಕೊಂಡ ರೋಗ ಹಾಗೂ ಇಳುವರಿ ಸಮಸ್ಯೆಯಿಂದ ಸಾಲ ತೀರಿಸಲು ಆಗದೆ ಕೌಶಿಕ್ ಪರದಾಡುತ್ತಿದ್ದ . ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿಬಹುದು ಎನ್ನಲಾಗುತ್ತಿದೆ.
ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ತನಿಖೆ ನಡೆಸುತ್ತಿದ್ದಾರೆ.