ಕನ್ನಡ ಕರಾವಳಿ ಸುದ್ದಿ: ಸ್ಪೇಸ್ ಮೀಡಿಯಾ DCX ಸಿಸ್ಟಮ್ಸ್ ಲಿಮಿಟೆಡ್ ಅರ್ಷಿಸುವ,ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ದಾನ ಶ್ರೀ ರಾಘವೇಂದ್ರ ಸ್ವಾಮೀಜಿಗಳ ಮಂತ್ರಾಲಯ,ಪರಮಪೂಜ್ಯ ಶ್ರೀ ಶ್ರೀ ಶ್ರೀ 1008 ಶ್ರೀ ಮತ್ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಕೊಡ ಮಾಡುವ ಪ್ರತಿಷ್ಠಿತ ಶ್ರೀ “ಮಂತ್ರಾಲಯ ಪರಿಮಳ ಪ್ರಶಸ್ತಿ 2025″ನ್ನು ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆಯ ಮೂಲಕ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ (ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ) ಶ್ರೀ ಗಣೇಶ ಮೊಗವೀರರವರನ್ನು ಆಯ್ಕೆ ಮಾಡಲಾಗಿತ್ತು,
ಶ್ರೀಯುತರು ಶಿಕ್ಷಣ ಕ್ಷೇತ್ರದಲ್ಲಿ ಇದುವರೆಗೆ ಸಲ್ಲಿಸಿದ ಸೇವೆ ಹಾಗೂ ಕೊಡುಗೆಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಮಾರ್ಚ್ 07 ರಂದು ಮಂತ್ರಾಲಯದಲ್ಲಿ ನಡೆದ ವೈಭವದ ಸಮಾರಂಭದಲ್ಲಿ ಮಂತ್ರಾಲಯ ಸ್ವಾಮೀಜಿಯವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು.