ಆರೋಗ್ಯ

ನರ್ಸಿಂಗ್ ಓದುತ್ತಿದ್ದ ಯುವತಿ ಕಿಡ್ನಾಪ್: ಯುವಕನ ಮೇಲೆ ಅಪಹರಣ ಕೇಸ್

Views: 66

ಕನ್ನಡ ಕರಾವಳಿ ಸುದ್ದಿ: ಬೆಳಗಾವಿ, ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯ ಕಿಡ್ನಾಪ್ ಆಗಿದ್ದು, ಮಗಳನ್ನು ಯುವಕ ಅಪಹರಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸದ್ರುದ್ದೀನ್‌ ಭೇಪಾರಿ ಎಂಬ ಯುವಕ ಮತ್ತು ನರ್ಸಿಂಗ್‌ ಓದುತ್ತಿದ್ದ ಯುವತಿ ನಡುವೆ ಸ್ನೇಹ ಬೆಳೆದಿತ್ತು. ನಂತರ ಈ ಸ್ನೇಹ ಪ್ರೀತಿಗೆ ತಿರುಗಿ ಎರಡರಿಂದ ಮೂರು ವರ್ಷಗಳೇ ಕಳೆದಿತ್ತು. ‌ಇದನ್ನು ಆಕ್ಷೇಪಿಸಿದ ಬಳಿಕ ಇವರಿಬ್ಬರೂ ನಾಪತ್ತೆಯಾಗಿದ್ದಾರೆ.

ಮನೆಯಲ್ಲಿ ಇವರಿಬ್ಬರ ಮದುವೆ ಸುದ್ದಿ ಹೇಳಿದ್ದೇ ತಡ ಹುಡುಗಿ ತಾಯಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಯುವತಿ ಮನೆಯಿಂದ ತೆರಳಿದ್ದಾಳೆ. ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಾರೆ ಕೆಲಸ ಮಾಡ್ತಿದ್ದ ಸದ್ರುದಿನ್ ಬೇಪಾರಿ ಎಂಬಾತನ ವಿರುದ್ಧ ಯುವತಿ ಕುಟುಂಬದವರು ಅಪಹರಣದ ಆರೋಪ ಹೊರಿಸಿದ್ದಾರೆ. 17 ದಿನಗಳ ಹಿಂದೆ ಹಿಂದೂ ಹುಡುಗಿಯನ್ನು ಸದ್ರುದ್ದೀನ್ ಎಂಬಾತ ಅಪಹರಿಸಿ ಕರೆದೊಯ್ದಿದ್ದಾನೆ ಎಂದು ದೂರಲಾಗಿದೆ. ಈ ಹಿನ್ನೆಲೆ ಆಕ್ರೋಶಗೊಂಡ ಯುವತಿ ಕುಟುಂಬಸ್ಥರು ಯುವಕನ ಮನೆ ವಿರುದ್ಧ ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

Related Articles

Back to top button