ಇತರೆ

ಕುಂದಾಪುರ: ಬೇಳೂರು ಗ್ರಾಮ ಸಹಾಯಕಿಗೆ ಮಾನಸಿಕ ಕಿರುಕುಳ,ನಿಂದನೆ ಆರೋಪ;15 ಮಂದಿಗೆ ಜಾಮೀನು

Views: 140

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಬೇಳೂರು ಗ್ರಾಮಪಂಚಾಯತ್‌ನ ಗ್ರಾಮ ಸಹಾಯಕಿ ಸುಶೀಲಾ ಅವರಿಗೆ ಮಾನಸಿಕ ಕಿರುಕುಳ ನೀಡಿರುವ ಹಿನ್ನಲೆಯಲ್ಲಿ 15 ಮಂದಿಯ ವಿರುದ್ಧ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪ ಎದುರಿಸುತ್ತಿದ್ದವರಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶರತ್ತು ಬದ್ಧ ನಿರೀಕ್ಷಣಾ ಜಾಮೀನು, ಮಂಜೂರು ಮಾಡಿದೆ.

ಸ್ಥಳೀಯರಾದ ಜಯಶೀಲ ಶೆಟ್ಟಿ, ರಾಘವೇಂದ್ರ ಮರಕಾಲ, ಕರುಣಾಕರ ಶೆಟ್ಟಿ ಬೇಳೂರು, ದಿನಕರ ಶೆಟ್ಟಿ ಮೊಗೆಬೆಟ್ಟು, ಸುರೇಶ ಮೊಗವೀರ, ಕೃಷ್ಣಯ್ಯ ಮೊಗವೀರ, ರಾಜಗೋಪಾಲ ಅಡಿಗ, ಅಶೋಕ್‌ ಕುಮಾರ್‌ ಶೆಟ್ಟಿ, ನವೀನ್‌ ಕುಮಾರ್‌ ಶೆಟ್ಟಿ, ರವಿ ಮುಳ್ಳುಗುಡ್ಡೆ, ಪ್ರವೀಣ ಶೆಟ್ಟಿ, ರಾಜೇಂದ್ರ ಶೆಟ್ಟಿ, ಸೀತಾರಾಮ ಶೆಟ್ಟಿ, ರವಿ ದೇವಾಡಿಗ, ಶಶಿಧರ ಶೆಟ್ಟಿ ಅವರು ಉಡುಪಿ ಜಿಲ್ಲಾಧಿಕಾರಿಯವರಿಗೆ ನನ್ನ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ದೂರನ್ನು ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.ಇದಲ್ಲದೆ ನಿಂದನೆಯನ್ನೂ ಮಾಡಿದ್ದಾರೆ. ಇದರಿಂದ ನನಗೆ ಮಾನಸಿಕ ನೋವು ಉಂಟಾಗಿದೆ ಎಂದು ಸುಶೀಲಾ ದೂರಿನಲ್ಲಿ ಹೇಳಿದ್ದಾರೆ.

ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಕ್ ಜಾಮೀನು ಮಂಜೂರು ಮಾಡಿದ್ದಾರೆ.

Related Articles

Back to top button
error: Content is protected !!