ಇತರೆ

ಬಿಸಿ ಗಂಜಿ ಪಾತ್ರೆಗೆ ಬಿದ್ದು 2 ವರ್ಷದ ಮಗು ಸಾವು

Views: 114

ಕನ್ನಡ ಕರಾವಳಿ ಸುದ್ದಿ: ನಾಯಿಗಳ ಆಹಾರಕ್ಕಾಗಿ ಬೇಯಿಸುತ್ತಿದ್ದ ಬಿಸಿ ಗಂಜಿ ಬೋಗಣಿಗೆ ಬಿದ್ದು 2 ವರ್ಷದ ಮಗು ಸಾವನಪ್ಪಿದೆ.

ಮುಂಡಗೋಡದ ಚಳಗೇರಿಯಲ್ಲಿ ಬೀರು ಲಂಬೋರ ಅವರು ಸಾಕಿದ್ದ ನಾಯಿಗಳಿಗೆ ನೀಡಲು ಸಂಜೆ ಗಂಜಿ ಬೇಯಿಸುತ್ತಿದ್ದರು. ಈ ವೇಳೆ ಅಲ್ಲಿ ಆಟವಾಡುತ್ತಿದ್ದ ಅವರ 2 ವರ್ಷದ ಮಗ ಕೃಷ್ಣ ಲಂಬೋರ್ ಕುದಿಯುತ್ತಿದ್ದ ಗಂಜಿ ಬೊಗಣಿಯಲ್ಲಿ ಬಿದ್ದು ಮೈ ಸುಟ್ಟುಕೊಂಡರು.

ತಕ್ಷಣ ಅವರನ್ನು ಮುಂಡಗೋಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ. ಶನಿವಾರ ಬೆಳಿಗ್ಗೆ ಕೃಷ್ಣ ಲಂಬೋರ್ ಸಾವನಪ್ಪಿದ ಬಗ್ಗೆ ವೈದ್ಯರು ತಿಳಿಸಿದರು.

Related Articles

Back to top button
error: Content is protected !!