ಸಾಮಾಜಿಕ

ಮುಂಬೈ ಪದ್ಮಶಾಲಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ದಯಾನಂದ ಡಿ.ಶೆಟ್ಟಿಗಾರ್ ಇನ್ನಿಲ್ಲ

Views: 440

ಕನ್ನಡ ಕರಾವಳಿ ಸುದ್ದಿ: ಮುಂಬೈ ಸಮಾಜ ಸೇವಕ,ಪದ್ಮಶಾಲಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ದಯಾನಂದ.ಡಿ ಶೆಟ್ಟಿಗಾರ್(74) ಅವರು ಡಿ.26 ರಂದು ಬೆಳಿಗ್ಗೆ 3 ಗಂಟೆಗೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತರಿಗೆ ಮೂರು ಜನ ಹೆಣ್ಣು ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮುಂಬೈ ಪದ್ಮಶಾಲಿಗರ ಪ್ರತಿಯೊಂದು ಸದಸ್ಯರ ಸುಖ-ದುಃಖಗಳನ್ನು ವಯಕ್ತಿಕವಾಗಿ ಹಂಚಿಕೊಂಡಿದ್ದಾರೆ. ಸಮಾಜದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲರ ಮೆಚ್ಚುಗೆ ಪಾತ್ರರಾದವರು.

2015 ರಲ್ಲಿ ಪದ್ಮಶಾಲಿ ಸಮಾಜ ಸೇವಾ ಸಂಘ ಆಧಾರ ಸ್ತಂಭವಾಗಿ ಅಧ್ಯಕ್ಷ ಸ್ಥಾನವನ್ನು ಪಡೆದವರು. ಯಾವುದೇ ಸದ್ದು- ಗದ್ದಲ ಇಲ್ಲದೆ ಪ್ರಶಸ್ತಿಯನ್ನು ಬಯಸದೆ ಸಮಾಜ ಸೇವೆಯನ್ನು ಮಾಡಿದ ದಯಾನಂದ ಅವರು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಸಮಾಜ ಸೇವೆಗೆ ಮೀಸಲಾಗಿಸಿದ್ದಾರೆ.ಇವರು ಮಹಾನ್ ಜೀವಿಯಾಗಿದ್ದು, ಜನಸೇವೆಯೇ ಜನಾರ್ದನ ಸೇವೆ ಎಂಬುವಂತೆ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅಸಂಖ್ಯ ಕುಟುಂಬಸ್ಥರಿಗೆ ಸೇವೆ ಸಲ್ಲಿಸಿ ಇದೀಗ ಪರಲೋಕಕ್ಕೆ ನಿರ್ಗಮಿಸಿದ ಶ್ರೀಯುತ ದಯಾನಂದ .ಡಿ ಶೆಟ್ಟಿಗಾರ್ ಅವರ ದಿವ್ಯಾತ್ಮಕ್ಕೆ ಪರಮಾತ್ಮನು ಚಿರಶಾಂತಿ ಅನುಗ್ರಹಿಸಲಿ ಎಂದು ನಮ್ಮೆಲ್ಲರ ಪ್ರಾರ್ಥನೆ

Related Articles

Back to top button
error: Content is protected !!