ಇತರೆ

ಕುಂದಾಪುರ: ಅಡಿಕೆ ಕೊಯ್ಲು ವೇಳೆ ವಿದ್ಯುತ್ ತಂತಿಗೆ ಕೊಕ್ಕೆ ತಾಗಿ ಸಾವು 

Views: 164

ಕುಂದಾಪುರ :ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವನಪ್ಪಿದ ಘಟನೆ ಕುಂದಾಪುರ ತಾಲೂಕಿನ ಶಂಕರ್ ನಾರಾಯಣ ಸಮೀಪ ಉಳ್ಳೂರು ಅಬ್ಬಿಬೇರು ಬಳಿ ಸಂಭವಿಸಿದೆ

ಅಬ್ಬಿಬೇರು ಎಂಬಲ್ಲಿ ಬಿಜು ಅಗಸ್ಟಿನ್‌ ಅವರ ತೋಟದಲ್ಲಿ ಅಡಿಕೆ ಕೊಯ್ಯುತ್ತಿರುವಾಗ ಅಲ್ಯುಮೀನಿಯಂ ಕೊಕ್ಕೆ(ದೋಟಿ)ಯು ವಿದ್ಯುತ್‌ ತಂತಿಗೆ ಸ್ಪರ್ಶಿಸಿ ಝಾರ್ಖಂಡ್‌ ರಾಜ್ಯದ ಕಾರ್ಮಿಕ ರಾಮ್‌ ಕಿಶುನ್‌ ಓರಾನ್‌ (34) ಮೃತಪಟ್ಟವರು.

ವಿದ್ಯುತ್‌ ಆಘಾತಕ್ಕೊಳಗಾಗಿ ನೆಲಕ್ಕೆ ಬಿದ್ದ ಅವರನ್ನು ಕೂಡಲೇ ಸ್ಥಳೀಯರು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದ್ದಾಗಿ ತಿಳಿಸಿದರು.

ಮೃತನ ಸಹವರ್ತಿ ಝಾರ್ಖಂಡ್‌ನ‌ ಬಿನೋದ್‌ ಓರಾನ್‌ ಅವರು ಶಂಕರನಾರಾಯಣ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

 

Related Articles

Back to top button
error: Content is protected !!