ಆರ್ಥಿಕ

ಕೋಟೇಶ್ವರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸೊಸೈಟಿಯಿಂದ ಸಾಲ ಪಡೆದು ವಂಚನೆ: ದೂರು

Views: 254

ಕುಂದಾಪುರ: ಕೋಟೇಶ್ವರ ಗ್ರಾಮದ ದಿನೇಶ್‌, ಹರೀಶ್‌ ಅವರು ರೋಜರಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯಿಂದ 10 ಲಕ್ಷ ರೂ. ಸಾಲ ಪಡೆದಿದ್ದು, ಅದಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿ, ವಂಚಿಸಿರುವುದಾಗಿ ಸೊಸೈಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೇಬಲ್‌ ಡಿ’ಅಲ್ಮೇಡಾ ದೂರು ನೀಡಿದ್ದಾರೆ.

ಆರೋಪಿಗಳಾದ ದಿನೇಶ್‌ ಹಾಗೂ ಹರೀಶ್‌ ಅವರು ಸಾಲಕ್ಕೆ ಗೋಪಾಡಿ ಗ್ರಾಮದ 0.05 ಎಕ್ರೆ ಆಸ್ತಿಯನ್ನು ಅಡಮಾನ ಇರಿಸಿದ್ದು, ಇದನ್ನು ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲಾಗಿತ್ತು. ಗೋಪಾಡಿ ಗ್ರಾ.ಪಂ. ಪಿಡಿಒ ಗಣೇಶ ಹಾಗೂ ಕಾರ್ಯದರ್ಶಿ ಹರಿಶ್ಚಂದ್ರ ಈ ಸ್ವತ್ತು ಸಂಖ್ಯೆ ಮರೆಮಾಚಿ, ಎರಡು ನಕಲಿ ಈ ಸ್ವತ್ತು ಸಂಖ್ಯೆ ಸೃಷ್ಟಿಸಿ ಬೇನಾಮಿ ಕ್ರಯ ಪತ್ರ ಮಾಡಿ ಸೊಸೈಟಿಗೆ ಮೋಸ ಮಾಡಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button