ಕುಂದಾಪುರ:ಕನ್ನಡ ಜನಪದ ಪರಿಷತ್, ಕರ್ನಾಟಕ ಪಬ್ಲಿಕ್ ಸ್ಕೂಲ್, “ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ”

Views: 48
ಕನ್ನಡ ಕರಾವಳಿ ಸುದ್ದಿ: ಕನ್ನಡ ಜಾನಪದ ಪರಿಷತ್ ಹಾಗೂ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಮತ್ತು ಕನ್ನಡ ಜನಪದ ಪರಿಷತ್ ಕುಂದಾಪುರ ತಾಲೂಕು ಘಟಕ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢ ಶಾಲಾ ವಿಭಾಗ) ಕುಂದಾಪುರ ತಾಲೂಕು ಬಿದ್ಕಲ್ ಕಟ್ಟೆ ,ಇವರ ಸಂಯುಕ್ತ ಆಶ್ರಯದಲ್ಲಿ ,ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ-2024 ನ.29 ರಂದು ಜರುಗಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕ. ಜಾ .ಪ. ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿ ಇವರು ನೆರವೇರಿಸಿ, ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಿಜಿಯವರ ಮಾರ್ಗದರ್ಶನದಲ್ಲಿ ಇಂತಹ ಕಾರ್ಯಕ್ರಮಗಳು ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲೂಕು ,ಗ್ರಾಮಗಳಲ್ಲಿ ನಡೆಯುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲರಾದ ಶ್ರಿಕರುಣಾಕರ ಶೆಟ್ಟಿ ಎಂ ವಹಿಸಿ ಮಾತನಾಡಿ, ಕನ್ನಡ ನಾಡಿನ ಮೂಲೆ ಮೂಲೆಯಲ್ಲೂ ಕನ್ನಡ ಜಾನಪದ ಸಂಸ್ಕೃತಿ ನೆಲೆನಿಂತಿದೆ ಇಂತಹ ಕಲೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರಿಂದ ಆಗಬೇಕಿದೆ ಎಂದರು.
ಕ.ಜಾ.ಪ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಸುಪ್ರೀತಾ ಪುರಾಣಿಕ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಈ ಸಂದರ್ಭದಲ್ಲಿ 10 ನೆ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇಕಡಾ 99. ಅಂಕ ಪಡೆದ ವಿದ್ಯಾರ್ಥಿನಿಯರಾದ ಕುಮಾರಿ ಅಭಿಜ್ಞಾ , ಕುಮಾರಿ ಸಾನಿಕಾ , ಹಾಗೂ ಕುಮಾರಿ ದೀಪ್ತಿ ಇವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.ಹಾಗೂ ಹಿರಿಯ ಜಾನಪದ ಜಾನಪದ ಕಲಾವಿದರಾದ ಶ್ರೀ ಶಿವರಾಂ ಪಾಣರ (ಹಿರಿಯ ಪಾಣರಾಟದ ಕಲಾವಿದರು)ಹಾಗೂ ಶ್ರೀಮತಿ ಚಿಕ್ಕು ಜಪ್ತಿ, ಶ್ರೀಮತಿ ಐತು ಜಪ್ತಿ ,ಇವರನ್ನು ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರೌಡ ಶಾಲಾ ವಿಭಾಗದ ಕನ್ನಡ ಸಹ ಶಿಕ್ಷಕರಾದ ಶ್ರೀಮತಿ ಸುಜಾತ, ಶ್ರೀ ನಾಗರಾಜ್ ಎನ್ , ಶ್ರೀ ಸುಧಾಕರ ಇವರನ್ನು ಹಾಗೂ ಉಪ ಪ್ರಾಂಶುಪಾಲರಾದ ಶ್ರೀ ಕರುಣಾಕರ ಶೆಟ್ಟಿ ಎಮ್ ಇವರನ್ನು ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೋಲು ಹೊಯ್ಯುವ ಹಾಡಿನ ಪ್ರಾತೀಕ್ಷತೆಯನ್ನು ಶ್ರೀಮತಿ ಚಿಕ್ಕು ಜಪ್ತಿ , ಶ್ರೀಮತಿ ಐತು ಜಪ್ತಿ ಹಾಗೂ ಶ್ರೀಮತಿ ಚೆಂದು ಇವರು ನಡೆಸಿಕೊಟ್ಟರು , ಕ.ಜಾ.ಪ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಸುಪ್ರೀತಾ ಪುರಾಣಿಕ ಇವರು ಪ್ರಾತೀಕ್ಷತೆಯನ್ನು ನಿರ್ವಹಿಸಿದರು , ಶ್ರೀ ಸಂಗೀತ ಬಿದ್ಕಲ್ ಕಟ್ಟೆ ಇವರು ಕಾರ್ಯಕ್ರಮ ನಿರ್ವಹಿಸಿ ಶಿಕ್ಷಕರಾದ ಶ್ರೀ ನಾಗರಾಜ್ ಎನ್ ವಂದಿಸಿದರು.








