ಸಾಂಸ್ಕೃತಿಕ

ಕಾಂತಾರ ಚಿತ್ರತಂಡ ತೆರಳುತ್ತಿದ್ದ ಬಸ್ ಕೊಲ್ಲೂರು ಸಮೀಪ ಅಪಘಾತ; ಹಲವರು ಗಂಭೀರ ಗಾಯ

Views: 430

ಕುಂದಾಪುರ: ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್-1 ಸಿನಿಮಾದ ಚಿತ್ರೀಕರಣವು ಅದ್ದೂರಿಯಾಗಿ ನಡೆಯುತ್ತಿದೆ. ಈ ಚಿತ್ರದ ಜ್ಯೂನಿಯರ್ ಕಲಾವಿದರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಪಲ್ಟಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಕಾಂತಾರಾ ಚಿತ್ರದ ಶೂಟಿಂಗ್, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿನ ಪ್ರಾಂತ್ಯಗಳಲ್ಲಿ ಭರದಿಂದ ಶೂಟಿಂಗ್ ನಡೆಸಿತ್ತು. ಇತ್ತೀಚೆಗೆ ಕೊಲ್ಲೂರಿನ ಕಡೆಗೆ ಪ್ರಯಾಣ ಬೆಳೆಸಿದ್ದ ಚಿತ್ರತಂಡ ಅಲ್ಲಿನ ಮುದೂರಿನ ಬಳಿ ಕೆಲವು ದೃಶ್ಯಗಳ ಶೂಟಿಂಗ್ ನಡೆಸಿತ್ತು. ಆನಂತರದಲ್ಲಿ, ಕೊಲ್ಲೂರಿನ ಮಾರ್ಗವಾಗಿ ಬೇರೆಡೆಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಮಿನಿ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ 20 ಜೂನಿಯರ್ ಕಲಾವಿದರು ಸಾಗುತ್ತಿದ್ದ ಈ ಬಸ್ ಜಡ್ಕಲ್ ಬಳಿ ಸಾಗುತ್ತಿದ್ದಾಗ ತಗ್ಗೊಂದನ್ನು ಇಳಿದು ಹತ್ತುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

.

Related Articles

Back to top button
error: Content is protected !!