ಸಾಂಸ್ಕೃತಿಕ

ಬಿಗ್‌ಬಾಸ್‌ ಮನೆಯಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ ಕೂಡಲೇ ನನ್ನನ್ನು ಮನೆಗೆ ಕಳಿಸಿಬಿಡಿ ಎಂದು ಕಣ್ಣೀರಿಟ್ಟ ಚೈತ್ರಾ ಕುಂದಾಪುರ!

Views: 167

ಕನ್ನಡ ಕರಾವಳಿ ಸುದ್ದಿ: ಕನ್ನಡದ ಬಿಗ್‌ಬಾಸ್‌ ಸ್ಪರ್ಧಿ ಚೈತ್ರಾ ಕುಂದಾಪುರ ಕ್ಯಾಮೆರಾ ಮುಂದೆ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್  ಮಧ್ಯೆ ಚೈತ್ರಾ ಅವರು ಕಣ್ಣೀರು ಹಾಕಿದ್ದಾರೆ. ನನಗೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ, ನನ್ನನ್ನು ಮನೆಗೆ ಕಳಿಸಿಬಿಡಿ ಎಂದು ಕಣ್ಣೀರಿಟ್ಟಿದ್ದಾರೆ.

ಹೌದು, ಕಳೆದ ಸಂಚಿಕೆಯಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಚೈತ್ರಾ ಕುಂದಾಪುರ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಹೀಗಾಗಿ ಅವರಿಗೆ ಚಿಕಿತ್ಸೆ ನೀಡಲೆಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸುಮ್ಮನೆ ಇರದ ಚೈತ್ರಾ ಕುಂದಾಪುರ ಅವರು ಡಾಕ್ಟರ್ ಹಾಗೂ ನರ್ಸ್‌ಗಳ ಬಾಯಲ್ಲಿ ಕಂಟೆಸ್ಟೆಂಟ್‌ಗಳ ಬಗ್ಗೆ ಒಪೀನಿಯನ್ ಪಡೆದುಕೊಂಡಿದ್ದಾರೆ. ಅಲ್ಲದೇ ಬಿಗ್‌ಬಾಸ್‌ ಮನೆಗೆ ಮತ್ತೆ ವಾಪಸ್ ಆದಾಗ ಎಲ್ಲರ ಮುಂದೆ ಒಂದೊಂದಾಗಿ ಅಭಿಪ್ರಾಯವನ್ನು ಹೇಳಿದ್ದಾರೆ. ಈ ಮೂಲಕ ಬಿಗ್‌ಬಾಸ್‌ ಮೂಲ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

ಈ ಬಗ್ಗೆ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ ಅವರು ಚೈತ್ರಾಗೆ ಚಳಿ ಬಿಡಿಸಿದ್ದಾರೆ. ಇದರಿಂದ ಮನನೊಂದ ಚೈತ್ರಾ ಕುಂದಾಪುರ ನನಗೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ, ನನ್ನನ್ನು ಮನೆಗೆ ಕಳಿಸಿಬಿಡಿ ಎಂದು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಮನೆ ಬಿಟ್ಟು ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತೀರಿ, ಬೆಳಗ್ಗೆ ಬಂದು ಅದನ್ನು ಹೇಳುವ ಉದ್ದೇಶವೇನು ಅಂತ ಕಿಚ್ಚ ಸದೀಪ್ ಪ್ರಶ್ನೆ ಮಾಡಿದ್ದಾರೆ. ಆಗ ಚೈತ್ರಾ, ನಾನೇ ಡಾಕ್ಟರ್ ಹತ್ತಿರ ಕೆಲವೊಂದು ಕೇಳಿದ್ದೇ, ಅಲ್ಲಿದ್ದ ನರ್ಸ್ ಹೀಗೆ ಹೇಳಿದ್ರು, ಪ್ರತಿಯೊಬ್ಬರ ಒಪಿನಿಯನ್ನಲ್ಲಿ ನನ್ನ ಒಪಿನಿಯನ್ ಸೇರಿಸಿ ಹೇಳಿಲ್ಲ ಅಂತ ಹೇಳಿದ್ದಾರೆ.

Related Articles

Back to top button
error: Content is protected !!