ಇತರೆ

ಹಬ್ಬದ ದಿನವೇ ಕಾರು-ಆಟೋ ರಿಕ್ಷಾ ನಡುವೆ ಬೀಕರ ಅಪಘಾತದಲ್ಲಿ ಇಬ್ಬರು ಸಾವು

Views: 132

ಕನ್ನಡ ಕರಾವಳಿ ಸುದ್ದಿ: ಆಟೋ ಹಾಗೂ ಕಾರಿನ ನಡುವೆ ಸಂಭವಿಸಿದ ಬೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಬಳಿ ಶುಕ್ರವಾರ ನಡೆದಿದೆ.

ಆಟೋ ಚಾಲಕ ರಾಘವೇಂದ್ರ (45) ಹಾಗೂ ಪ್ರಯಾಣಿಕರಾದ ಮಾಲತಿ (35) ಮೃತರು. ಮಾಲತಿ ಹಾಗೂ ಕುಟುಂಬದವರು ಆಟೋದಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಆಟೋ ಚಾಲಕ ಹಾಗೂ ಮಾಲತಿ ಮೃತಪಟ್ಟಿದ್ದಾರೆ. ಮಾಲತಿ ಪತಿ ಹಾಗೂ ಇಬ್ಬರು ಮಕ್ಕಳಿಗೆ ಗಾಯಗಳಾಗಿವೆ.

Related Articles

Back to top button
error: Content is protected !!